Monday, November 7, 2011

ಸಣ್ಣ ವ್ಯಥೆ - 11

ಅವನ ಮನಸ್ಸೇ ಹಾಗೆ , ಯಾವುದೇ ಒಳ್ಳೆಯ ವಿಚಾರ,ಕೆಲಸಗಳನ್ನು ಸಹಿಸಿಕೊಳ್ಳುತ್ತಿರಲಿಲ್ಲ. ಅವನು ಬೆಳೆದ ವಾತಾವರಣದಲ್ಲಿ ಎಲ್ಲಿ ದೋಷವಿತ್ತೋ ತಿಳಿಯದು.ಆದರೆ ಒಳ್ಳೆಯ ವಿಚಾರಗಳು ಅವನ ಮೂಗಿನ ನೇರಕ್ಕೆ ಅಸಮಂಜಸ ಮತ್ತು ಕೆಟ್ಟದಾಗಿ ಕಾಣುತ್ತಿದ್ದವು. ಒಮ್ಮೆ ನಮ್ಮ ಮನಸ್ಕನ ಸ್ನೇಹಿತ ತನ್ನ ವಿಚಾರಗಳನ್ನು ಮುದ್ರಿಸಿ ಹಂಚಿದನು ಮತ್ತು ಆ ವಿಚಾರಗಳು ಮನುಷ್ಯನ ಜೀವನವನ್ನು ಕನ್ನಡಿಯಂತೆ ಹಿಡಿಯಲು ಪ್ರಯತ್ನಿಸಿದ್ದವು . ಬಹಳ ಜನರಿಗೆ ಆ ವಿಷಯಗಳು ಸನ್ಮಾರ್ಗದಲ್ಲಿ ನಡೆಯಲು ಪ್ರೇರೇಪಣೆ ಯಾಗಿದ್ದವು. ಆದರೆ ನಮ್ಮ ಮನಸ್ಕನಿಗೆ ಈ ವಿಚಾರಗಳು ಯಾವು ಹಿಡಿಸಲಿಲ್ಲ ಮತ್ತು ಇವನ ವಾದವು ಬೇರೆಯದೇ ಆಗಿತ್ತು.
ಆದರೆ ನಮ್ಮ ಮನಸ್ಕ ಒಂದು ಹೆಜ್ಜೆ ಮುಂದೆ ಹೋಗಿ , ಸ್ನೇಹಿತನ ವಿಚಾರಗಳನ್ನು ಅಲ್ಲಗೆಳೆದನು,ದೂಷಿಸಿದನು ಮತ್ತು ಅಸಮಂಜಸ ಎಂದು ತನ್ನ ಪತ್ರಿಕೆಯಲ್ಲಿ ಬರೆದುಕೊಂಡ. ನಮ್ಮ ಹಿರಿಯರು ಕೂಡ ಮನಸ್ಕನ ವಾದವನ್ನು ಸರಿಯಾಗಿ ಪರಿಶೀಲಿಸದೆ ಒಪ್ಪಿಕೊಂಡರು ಮತ್ತು ಮನಸ್ಕನ ಸ್ನೇಹಿತನ ವಿಚಾರ ಧಾರೆಯ ಮೇಲೆ ನಿಷೇಧ ಹೇರಿದರು.
ಹಿರಿಯರು ಏಕೆ ಪರಿಶೀಲಿಸದೆ ನಿಷೇಧ ಹೇರಿದರು , ಇದೇ ತಪ್ಪಲ್ಲವೇ ಖ್ಯಾತ ಖಗೋಳ ಶಾಸ್ತ್ರಜ್ಞ ಕೋಪರ್ನಿಕಸ್ ನ ಸಾವಿಗೆ ಕಾರಣವಾಗಿದ್ದು?
ಪರರ ಮೇಲೆ ಕಲ್ಲೆಸೆಯುವಾಗ , ಮೊದಲು ನಾವು ಗಾಜಿನ ಮನೆಯಲ್ಲಿ ಇದ್ದೇವೆ ಎಂದು ಏಕೆ ಮರೆಯುತ್ತೇವೆ ?
ದಯವಿಟ್ಟು ಸೂಕ್ತವಾದ ಮಾಹಿತಿ ಇಲ್ಲದೆ ತೀರ್ಮಾನ ತೆಗೆದುಕೊಳ್ಳಬೇಡಿ ಮತ್ತು ಯಾರನ್ನು ನೋಯಿಸಬೇಡಿ.

- ಗಂಗರಾಜು.ಕು.ಸಿ.

1 comment:

  1. ಆ ಖಗೋಳ ಶಾಸ್ತ್ರಜ್ಞರಾದ ಕೋಪರ್ನಿಕಸ್ ಬಗ್ಗೆ ಹೆಚ್ಚಾಗಿ ಗೊತ್ತಿಲ್ಲ... ಆದರೆ ... ಸಾಮನ್ಯ ಚಿಂತನೆಯಲ್ಲಿ ಈ ಮಾತುಗಳು ಒಪ್ಪುವಂತಹಾ ಸತ್ಯವನ್ನೇ ಸೂಚಿಸುತ್ತದೆ.. :)

    ReplyDelete