Monday, September 14, 2009

ನೆನಪುಗಳ ಮಾತು ಮಧುರ - ಕವನಗಳ ಗುಚ್ಹ

೧) ಜೀವನದ ಎರಡು ಕ್ಷಣಗಳು ಅದ್ಭುತ
ಒಂದು ಹುಟ್ಟು ಇನ್ನೊಂದು ಸಾವು
ಈ ಎರಡು ಕ್ಷಣಗಳ ಮಧ್ಯ ಇಹುದು
ಕ್ಷಣ ಕ್ಷಣಗಳ ನಲಿವು ಮತ್ತು ನೆನಪು.

೨)ಬಣ್ಣದ ಬದುಕಿಗೆ ಬವಣೆಯೇ ಬೆಳಕು
ಭಾರದ ಬದುಕಿಗೆ ಭಯವೇ ಬೆಳಕು
ಬೆಳಕಿನಲ್ಲಿ ಕಂಡ ನನ್ನ ಚೆಲುವೆಯ ರೂಪ
ನನ್ನ
ಕನಸು ಮತ್ತು ಬದುಕಿನಲ್ಲಿ ಬಂದರೆ ಅದೇ ನನಗೆ ಬೆಳಕು

೩) ಕಳೆದುಕೊಂದನ್ಥೆಮುನ್ನ ನಮ್ಮ ಭಾವನೆ ಮಡದಿ ಇದ್ದರೆ ಚೆನ್ನ
ಆದರೆ ಮದುವೆಯ ನಂತರ ನಮ್ಮ ಭಾವನೆ ಮಡದಿ ಬಿದ್ದರೆ ಚೆನ್ನ
ಕಳೆದುಕೊಂದನ್ಥೆ , ಮಡದಿ ,ಮಡಿ ಇದೆ ಜೀವನದ ಭಾವನೆ
ಭಾವನೆಗಳ ಸುಳಿಯೆಲ್ಲಿ ಜೀವನ

೪)ಕಾಣದ ಕಥೆಯೇ ಜೀವನ
ಊಹೆಯ ವ್ಯಥೆಯೇ ಜೀವನ
ಈ ಅವ್ಯವಸ್ಥೆಯಲ್ಲಿ ಅವಸರಪಡದೆ
ಅನುಸರಿಸಿಕೊಂಡು ಜೀವಿಸುವುದು ಪಾವನ

೫) ಮದುವೆಗೆ ಮುನ್ನ ನಮ್ಮ ಕವನಗಳು
ನನ್ನ ಚೆಲುವೆ ಎಲ್ಲಿರುವೆ ,ಹೇಗಿರುವೆ , ಎನ್ನುತಿರುಥವ್ವೆ
ಮದುವೆಯ ನಂತರ ನಮ್ಮ ಕವನಗಳು ಅಯ್ಯೋ ನನ್ನವಳೇ
ನೀ ಎಲ್ಲಿರುವೆಯೋ ,ಅಲ್ಲಿಯೇ ಇರು ...
ಭಾವನಾತ್ಮಕ ಜೀವನ ಮದುವೆಯ ಬಳಿಕ

೬) ಬಳುಕುವ ಬಳ್ಳಿಯಂತ್ಹಿದ್ದಳು ನನ್ನ ಕನಸಿನ ರಾಣಿ
ಮದುವೆಗೆ ಮುಂಚೆ ,
ಆದರೆ ನಂತರ
ಬಿರುಗಾಳಿಗೂ ಅಲುಗಾಡಲ್ಲ ಅಂತಾಳೆ ನನ್ನ ನನಸಿನ ರಾಣಿ

೭) ಕರ್ನಾಟಕದಲ್ಲ್ಲಿ ಕವಿಗಳ ಸಂಖೆ ಅಪಾರ
ಕಾರಣ ಇಲ್ಲಿ ಎಲ್ಲರು ಹೆಂಡತಿಯೊಂದಿಗೆ ಬೇಸತ್ತ ರಸಿಕರೇ

೮) ಜೀವನದ ಅದ್ಭುತ ಕ್ಷಣಗಳು ನೆನಪುಗಳು
ಕಾರಣ ನೆನಪುಗಳು ನೆನೆವ ಹೃದಯದಲ್ಲಿರುವ ಹೂಗಳು
ನೆನಪೇ ಜೀವನ
ನೆನೆದರೆ ಪಾವನ

೯) ಜೀವನದ ಜಂಜಾಟದಲ್ಲಿ
ನೆನಪುಗಳೇ ಮಾನವನ ಕೊರತೆಗಳನ್ನು ನೀಗಿಸುವ ತಾಣಗಳು
ಈ ತಾಣಗಳು ಮರುಭೂಮಿಯ ಸೆಲೆಯಲ್ಲ
ಸಿಹಿ ಸಾಗರದ ಅಲೆಗಳು ,
ನೆನಪುಗಳ ಮಾತು ಮಧುರ ,ನೆನಪುಗಳ ಭಾಷೆ ಮಧುರ

೧೦) ನೆನೆವ ಬಯಕೆ ಇದದ್ರೆ ಸಾಲದು
ನೆನೆದರೆ ವ್ಯಕ್ತಿ ಪ್ರಸಂಗ ಎಲ್ಲವು ಕನ್ಮುನ್ಧೆ ಪ್ರತ್ಯಕ್ಷವಾಗಿ ನಡೆದಂತೆ ಇರಬೇಕು,
ನೆನೆವುದು ನೆನಪಾದರೆ ,
ಜೀವನದ ಭೋಗ ಭಾಗ್ಯಗಳಲ್ಲಿ ನೀ ಬಹಳಷ್ಟು kaledukondanthe




೧೧) ಮಧುರ ಭಾವನೆಗಳು ಮನಸ್ಸಿನ ಅಂಥಸ್ಥುಗಳು
ಹಂತ-ಹಂತದ ಜೀವನದಲ್ಲೂ ಈ ಭಾವನೆಗಳೇ
ಬದುಕ ಬಯಸುವ ಬಯಕೆಗಳು
ನಾಳೆ ಎಂಬುದು ನರಕವಾದರೆ
ನೆನ್ನೆ ಎಂಬುದು ಸ್ವರ್ಗವಾಗುತ್ತದೆ

ನೆನಪೇ ಜೀವನ
ನೆನೆದರೆ ಪಾವನ

1 comment: