Thursday, September 3, 2009

ಇಂದಿನ ಹಾಡುಗಳು ಮತ್ತು ಅಂದಿನ ಹಾಡುಗಳು - ಒಂದು ಸುಂದರ ನೆನಪು

ಹೀಗೆ ಮೊನ್ನೆ ಟಿವಿ ಮುಂದೆ ಕುಳಿತು remote ಹತ್ರ ಆಟ ಆಡ್ತಾ ಇದ್ದೆ , ತಕ್ಷಣ ನಮ್ಮ ಉದಯ ಟಿವಿ ಅಲ್ಲಿ ಒಂದು ಹಾಡು ಬಂತು ಸರ್ , ಏನ್ ಹೇಳಲಿ ಅದರ ಅಂದಾವ ,ಆ lyrics, ಡಾನ್ಸ್, ಆ ಕಿತ್ತೋಗಿರೋ ಹೀರೋ, ಡಬ್ಬ ಹೀರೋಯಿನ್ .
ನಮ್ಮ ಕನ್ನಡ ಪ್ರೇಕ್ಷಕ ರನ್ನು ನಾವು ಮೆಚ್ಚಿಕೊಲ್ಲಲೇ ಬೇಕು ,ಹೇಗೆ ಈ ಜನ ಇವರನ್ನು ಎಲ್ಲ ಸಹಿಸಿ ಕೊಂಡಿದಾರೆ ಅಂಥ. ದುಡ್ಡು ಇರೋವ್ರೆಲ್ಲ ಹೀರೋ, ಹೀರೋಯಿನ್ ಆದರೆ ಪ್ರೇಕ್ಷಕರು ಯಾರು ಆಗ್ತಾರೆ ಅಲ್ವ ?


ಎಂಥ ಪರಿಸ್ಥಿತಿ ಬಂದಿದೆ ಸರ್, ನಮ್ಮ ಕನ್ನಡ ಪ್ರೇಕ್ಷಕರಿಗೆ, ಒಂದು ಸರಿಯಾದ ಮನರಂಜನೆ ಕೊಡೋದಕ್ಕೆ ನಮ್ಮ ಚಿತ್ರ ರಂಗಕ್ಕೆ ಆಗ್ತಾ ಇಲ್ಲ ಅಂದ್ರೆ ಥೂಊ . ಇವರೆಲ್ಲ ನಮ್ಮ ಅಣ್ಣಾವ್ರು ಹಾಕಿದ ದಾರಿಯಲ್ಲಿ ಹೇಸಿಗೆ ಮಾಡ್ತಾ ಇದಾರೆ ಅಂದ್ರೆ ತಪ್ಪಾಗಲ್ಲ ಅನಿಸುತ್ತೆ .

ಒಂದು ೧೫ ದಿನಗಳ ಹಿಂದೆ ಮಗಧೀರ ಚಿತ್ರ ಭರ್ಜರೀ ಯಾಗಿ ಪ್ರದರ್ಶನ ಕಾಣುವಾಗ , ನಮ್ಮ ಫಿಲಂ ಚೇಂಬರ್ ಅವರು ಬೇರೆ ಭಾಷೆಯ ಚಿತ್ರಗಳು ೧೪ ಥಿಯೇಟರ್ ಗಳಿಗಿಂತ ಹೆಚ್ಚು ಚಿತ್ರ ಮಂದಿರದಲ್ಲಿ ತೆರೆ ಕಾಣಬಾರದು ಅಂಥ ಧರಣಿ ಕುಳಿತರು , ತು ಇವರ ಜನ್ಮಕ್ಕೆ ಒಳ್ಳೆ ಚಿತ್ರ ಮಾಡ್ರೋ ಮಕ್ಕಳ ಅಂದ್ರೆ ಬೇರೆ ಭಾಷೆಯ ಚಿತ್ರ ನೋಡಬೇಡಿ ಅಂಥ ಹೇಳೋಕೆ ಅವರು ಯಾರು ಸರ್ ......

ಎಂಥ songs ಬರ್ತಿದೆ ಗೊತ್ತ ನಿಮಗೆ ,ಕೇಳಿದರೆ ಇದು ನಮ್ಮ ಕನ್ನಡ ಭಾಷೆಯಲ್ಲಿ ಇರುವ ಸಾಹಿತ್ಯ ನ, ಇವು ನಮ್ಮ ಕನ್ನಡ ಪದಗಳ ಅಂಥ ಅನಿಸುತ್ತೆ. ಈಗಿನ ಕಾಲದಲ್ಲಿ ಸಿನಿಮಾ ದಲ್ಲಿ ಹಾಡು ಬಂದರೆ ಜನ cigarete ಹೋಡಿಯಲೋ ,ಇಲ್ಲ ಮತ್ತೇನೋ ಮಾಡಲೋ ಹೋಗ್ತಾರೆ , ಒಂದು ಥರ ಹೇಳ್ಬೇಕು ಅಂದ್ರೆ ಒಂದು ಫಿಲಂ ಅಲ್ಲಿ ೬+೧ = ಒಟ್ಟು ಏಳು intervels ಅಂಥ ಆಯಿತು.
ಈ ಥರ intervels ಗೆ ನಾವು ಚಿತ್ರ ನೋಡೋಕೆ , ನಾವು ಯಾರು, ಯಾರು ಜೋಥೆನೋ ,ಇನ್ನೇನೋ ಮಾಡಲು ಚಿತ್ರ ಮಂದಿರಕ್ಕೆ ಹೋಗ್ತಾ ಇರ್ತಿವಿ.

ನಾನು ಇನ್ನು main ಪಾಯಿಂಟ್ ಗೆ ಬರಲೇ ಇಲ್ಲ ,ನೋಡಿದ್ರ ನಮ್ಮ ಚಿತ್ರ ರಂಗದ ಹುಳುಕು ಗಳನ್ನೂ ಕೆದುಕತ ಹೋಗ್ತಾ ಇದ್ರೆ ನಮ್ಮ ಕ್ಯೆ ಮತ್ತು ಬಾಯಿ ಕೆಸರು ಆಗುತ್ತೆ ಅಸ್ಟೇ.

ಎಂಥ ಸಾಹಿತ್ಯ ಕಣ್ರೀ ನಮ್ಮ ಹಳೆಯ ಹಾಡುಗಳಲ್ಲಿ ಇದ್ದಿದ್ದು " ಓಡುವ ನದಿ ಸಾಗರವ ಸೇರಲೇ ಬೇಕು ,ಸೇರಿ ಬಾಳಲೇಬೇಕು ಬಾಳಿ ಬದುಕಲೇಬೇಕು ", ಈಥರ ನಮ್ಮ ಜೇವನ ವೆಲ್ಲ ವನ್ನು ಒಂದು ಹಾಡಿನಲ್ಲಿ ಅಥವಾ ಒಂದು ಪಲ್ಲವಿ ಯಲ್ಲಿ ಹೇಳ್ತಾರೆ ಅಂದ್ರೆ ,ನಮ್ಮ ಚಿತ್ರ ಕವಿ ಗಳಲ್ಲಿ ಇದ್ದ ಭಾಷ ಪ್ರೌಢಿಮೆ ಏನು ಅಂಥ ಗೊತ್ತಾಗುತ್ತೆ. ಇವಾಗ ಎಲ್ಲ ಲವ್ failure ಅಗಿರೋವ್ರೆಲ್ಲ ಕವಿಗಳೇ,ಎಣ್ಣೆ ಜಾಸ್ತಿ ಅದೊವ್ರೆಲ್ಲ ಕವಿಗಳೇ , ಕನ್ನಡ first language ತಗೊಂದೊವ್ರೆಲ್ಲ ಕವಿಗಳೇ, ಕನ್ನಡ ನ್ಯೂಸ್ ಪೇಪರ್ ಓದೋವ್ರೆಲ್ಲ ಕವಿಗಳೇ ...ಅವರು ಬರೆವ ಸಾಹಿತ್ಯ ನೋ ,ಅವರ ಭಾಷ ಪ್ರೌಢಿಮೆ ನೋ , kalla ನನ್ ಮಕಳು ಕನ್ನಡ ನ ಕರ್ಕಶ ಮಾಡಿ ಬಿಡ್ತಾರೆ.

ಸಂತ ಎಂಬ ಕಿತ್ತೋಗಿರೋ ಮತ್ತು ಡಬ್ಬ ಚಿತ್ರವನ್ನು ನಾನು ನೋಡಿದೆ, ಏನು ಹಾಡುಗಳು ಅಂತಿರ "ಹಾರ್ಟ್ ಅನ್ನೋ ಅಡ್ಡದಲ್ಲಿ ಲವ್ ಅನ್ನೋ ಲಾಂಗ್ ಹಿಡಿದು ,ನನ್ನನ್ನ ಅಟ್ಯಾಕ್ ಮಾಡೋ ಶಿವ ,ಶಿವ " ಯಪ್ಪಾ ಯಾವ ಸೂ .. ಈ ಹಾಡನ್ನು ಬರೆದಿರ ಬೇಡ , ಇದರ ಜೊತೆಗೆ ನಮ್ಮ ಗುರುಕಿರಣ್ ಅವರ ಕದ್ದ ಮ್ಯೂಸಿಕ್. ಈ ಗುರು ಕಿರಣ್ ಇದಾರಲ್ಲ ಅವರು ನಮ್ಮ ರಾಯರ ಭಕ್ತಿ ಗೀತೆ ಗಳನ್ನೂ ಪಾಪ್ ಮಾಡಲು ಹೋಗಿದ್ದರು, ಎಂಥ ಭೂಪ ಕಣ್ರೀ ಇವನು . ಈ remix ಅಂಥ ಅಂದ್ರೆ ಇಸ್ಟೇ, ಒಂದು ಒಳ್ಳೆಯ ಮತ್ತು ಕೇಳಲು ಹಿತ ವಾದ ಸಾಂಗ್ ಗಳನ್ನೂ , ಯಾರು ಕೇಳಲು ಸಾದ್ಯ ವಾಗದ ಹಾಗೆ , ಗದ್ದಲ ಮಾಡಿ, ಹಾಡನ್ನು ಎಡವಟ್ಟು ಮಾಡುವ ಪ್ರಕ್ರಿಯೆಗೆ remix ಅಂದು ಸಂಭೋದಿಸುತ್ತಾರೆ .ಇದು ಒಂಥರಾ ಜೀಲೆಬಿಗೆ ಪಾನಿ ಪೂರಿ ಹಾಕಿದ ಹಾಗೆ.

ಹೀಗೆ ನಮ್ಮ ಚಿತ್ರ ಸಾಹಿತ್ಯ ವನ್ನು , ಅದು ಎಸ್ಟೋ ಜನ ಹಾಳು ಮಾಡ್ತಾ ಹೊಗ್ತ್ಹಾವ್ರೆ .......


update ಗೆ wait ಮಾಡಿ ...

ಇಂತಿ ನಿಮ್ಮ
ಗಂಗ

3 comments:

  1. Sooper kaNri..Neeve yaake namma chitra rangana uDDhaara MaaDbaardu???

    ReplyDelete
  2. ಜೀಲೆಬಿಗೆ ಪಾನಿ ಪೂರಿ ಹಾಕಿದ ಹಾಗೆ.

    Very True. .. .. .

    ReplyDelete
  3. enappa ganaga..'rebel' aagidiya..

    telugu industry nalli rokka ide , craze ide..
    aadre namma sandalwoood nalli paisa and craze eradu illa..

    neenu helida haage "sahukararu" cinema thagithare..avara abiruchi ge thakka , avra range na cinema madthare..

    illa andre innu kelavu 'medhavi' galu 'prasasthi'(central awards) ge cinema madthare..thale buda artha aagalla..
    ex:naanu 'gulabi talkies' na bahala nireekshe ittu kondu nodide..adakke yaardru timepass madakke hogoke aagutha?? illa ve illa..

    keep the good work going..

    inthi ninna preethiya geleya,
    HRK(Ramakrishna)

    ReplyDelete