Thursday, September 3, 2009

ನನ್ನ ಕವನ ಸಂಕಲನ --- ಎನ್ನ ಚೆಲುವೆಯ ಕನಸು

) ಮಳೆಯ ಹನಿಯ ಹಾಗೆ ಉಲ್ಲಾಸ ನೀಡುವುದು
ಎನ್ನ ಚೆಲುವೆಯ ರೂಪ
ಮನದ ಮಳೆಯಾದ ಪ್ರೀತಿಗೆ ಯಾವಾಗ
ಅವಳು ಉಲ್ಲಾಸ ನೀದುವಲೋ ನೋಡಬೇಕು

) ಪ್ರೀತಿಯ ಬೆನ್ನೇರಿ ಕುಳಿತವ ನಾ
ಪ್ರೇಮದ ಪರವಶಕೆ ಸಿಲುಕದವ ನಾ
ಅಂಥಹ ಪುರುಷನಿಗೆ ಕಂಡಳು ಒಮ್ಮೆ ನನ್ನ ಚೆಲುವೆ
ಅಂದೇ ಬಿದ್ದಿತು ನನ್ನ ಮನಕೆ ಪ್ರೀತಿ ಪ್ರೇಮವೆಂಬ ಅಪರೂಪ ಚಿಂತನೆ

) ನಡೆದಾಡುವ ಎನ್ನ ಚೆಲುವೆಯ ನೋಡುತಿದ್ದರೆ
ನನ್ನ ಭಾವನೆಗಳು ಭಾವನ ಲೋಕದ ಆಚೆ ಇರುತ್ಹವೇ
ಆದರೆ ಎನ್ನಡೆಗೆ ನಡೆಬರುವ ನನ್ನ ಪ್ರೇಯಸಿ ನೋಡಿದರೆ
ಭಾವನೆಗಳು ಎನ್ನ ಹೃದಯದ ಆಳಕ್ಕೆ ಹೋಗುತ್ಹವೇ .


ಮೂನ್ದುವರೆದ ಕವನಗಳು
೪) ಎಂಥ ಖುಷಿ ,ಎಂಥ ಮುದ
ಚೆಲುವೆಯ ನೆನೆಪು ಮನದಲ್ಲಿ ಮೂಡಿದಾಗ
ಯಾಕೋ ಗೊತ್ತಿಲ್ಲಪ್ಪ ಮದುವೆಯ ನಂತರ
ನನ್ನ ಚೆಲುವೆಯ ನೆನಪು ಕಡಿಮೆಯಾಗುತಿದೆ

೫) ಪ್ರೀತಿಯೆಂಬುದು ಆಪಾರ
ಅಪಾರಕ್ಕೆ ಅಪರಿಮಿಸುವಂತೆ ಪ್ರೀತಿಸಿದೆ ನನ್ನ ಚೆಲುವೆಯನ್ನು
ಆದರ ನನ್ನ ಪ್ರೀತಿಯನ್ನು ಅಪಾರ ಎಂದರೆ
ಅಳತೆ ಮಾಡಿದ ಹಾಗೆ ಆಗುತ್ತದೆ .

ನಿರೀಕ್ಷಿಸಿ ಮತ್ತಷ್ಟು ಕವನಗಳನ್ನು
ದಯವಿಟ್ಟು ನಿಮ್ಮ ಅಭಿಪ್ರಾಯಗಳನ್ನು ತಿಳಿಸಿ .....


3 comments:

  1. Superb kavanagalu gangu.. :) Esp nanage eradane padhya thumba ishta aaythu.. Overallaagi helbekaadhre, bhasheya balake uttamavaagi bandhidhe haagu ninna chintanegalu kavanagala moolaka bahala channagi moodi bandhidhe.. Inashtu hechchu kavanagalannu bareyuvanthavanaagu gangu.. :)

    ReplyDelete