ಬದುಕೇ ಹಸಿರು ಪ್ರೀತಿ ಬೆರೆತಾಗ, ಬದುಕೇ ಕೆಸರಂತೆ ದ್ವೇಷ ಇರುವಾಗ, ವಿಷದ ಮುಳ್ಳಂತೆ ಸೇಡು ಸಿಡಿದಾಗ, ಬದುಕೇ ಹಸಿರು ಪ್ರೀತಿ ಬೆರೆತಾಗ - ಚಿ. ಉದಯಶಂಕರ್ .
Wednesday, June 27, 2012
Wednesday, June 13, 2012
ಸಣ್ಣ ವ್ಯಥೆ -18
ಮರೆತ ಹಾಡು ಅಂದು ಯಾಕೋ ಪದೆ ಪದೆ ಮನದಲ್ಲಿ ಸುಳಿಯುತ್ತಲೇ ಇತ್ತು , ಕೆಲವೊಮ್ಮೆ ತುಟಿಗಳಲ್ಲಿ ಜಿನುಗಿತ್ತು ಕೂಡ .ಆ ಹಾಡು ನಾನು ಜೀವಿಸಿದ ಕೆಲವು ಅಮೂಲ್ಯ ಕ್ಷಣಗಳ ಕನ್ನಡಿ. ಅಂದು ಕೂಡ ಅಷ್ಟೇ, ಅಮ್ಮ ಹೇಳುತ್ತಲೇ ಇದ್ದಳು ಸುಮ್ಮನೆ ಆತುರದಲ್ಲಿ ನಿರ್ಧಾರ ತಗೋ ಬೇಡ , ಮುಂದೆ ನೀನೆ ಅನುಭವಿಸಬೇಕಾಗುತ್ತೆ ಅಂಥ, ಆದರೆ ನಾನು ನನ್ನ ಮೂಗಿನ ನೇರಕ್ಕೆ ಹೋದೆ.ಆ ಅನುಭವ ಮತ್ತೆ ಈ ಹಾಡಿನ ರೂಪದಲ್ಲಿ ಇಂದು ಉದ್ಧ್ಗಾರಗೊಳ್ಳುತ್ತಿದೆ. ಹಾಂ ಆ ಹಾಡು "ಏನೋ ಮಾಡಲು ಹೋಗಿ , ಏನು ಮಾಡಿದೆ ನೀನು ..." .ಇಂದು ಏನು ತಪ್ಪು ಮಾಡ ಹೊರಟ್ಟಿದ್ದೇನೆ ಎಂದು ಮನದಲ್ಲೇ ಲೆಕ್ಕ ಹಾಕುವಾಗ ಯಾಕೋ ಆಲೋಚನೆಗಳು ಹಾದಿ ತಪ್ಪುವ ಲಕ್ಷಣಗಳು ಕಂಡವು.
ತಕ್ಷಣ ಪಕ್ಕದಲ್ಲೇ ಮಲಗಿದ್ದ ನನ್ನ ಹೆಂಡತಿ ತಲೆಗೆ ಒಂದು ಮೊಟಕಿ , "ಸಾಕು ಲೈಟ್ ಆಫ್ ಮಾಡಿ ಬಿದ್ಕೋಳಿ. ಬೆಳಗ್ಗೆ ಇಂದ ಕೆಲಸ ಇಲ್ದೆ ಸೋಮಾರಿ ಬಿದ್ರೆ, ನಿದ್ರೆ ಎಲ್ಲಿ ಬರುತ್ತೆ" .
-- ಗಂಗರಾಜು.ಕು.ಸಿ.
ತಕ್ಷಣ ಪಕ್ಕದಲ್ಲೇ ಮಲಗಿದ್ದ ನನ್ನ ಹೆಂಡತಿ ತಲೆಗೆ ಒಂದು ಮೊಟಕಿ , "ಸಾಕು ಲೈಟ್ ಆಫ್ ಮಾಡಿ ಬಿದ್ಕೋಳಿ. ಬೆಳಗ್ಗೆ ಇಂದ ಕೆಲಸ ಇಲ್ದೆ ಸೋಮಾರಿ ಬಿದ್ರೆ, ನಿದ್ರೆ ಎಲ್ಲಿ ಬರುತ್ತೆ" .
-- ಗಂಗರಾಜು.ಕು.ಸಿ.
Thursday, March 8, 2012
ಸಣ್ಣ ವ್ಯಥೆ -17
is IT?
----------
ನಾವೆಲ್ಲಾ ಅಂದು ಗಾಂಧೀ ಜಯಂತಿಯ ಅರ್ಧ ದಿನದ ರಜೆಯನ್ನು ಲಗೋರಿ ಆಟದಲ್ಲಿ ಕಳೆಯುತ್ತಿದೆವು. ನಮ್ಮೆಲ್ಲರ ಚಿತ್ತ ಅಲ್ಲಿ ಚೆಲ್ಲ ಪಿಲ್ಲಿಯಾಗಿದ್ದ ಕಲ್ಲುಗಳ ಮೇಲೆ ಮತ್ತು ಚೆಂಡಿನ ಹಿಂಬಾಲಕನ ಮೇಲೆ ನೆಟ್ಟಿತ್ತು.
ತತ್ಕ್ಷಣಕ್ಕೆ ನನ್ನ ಗಮನ ಆಕಾಶಕ್ಕೆ ಸೂರೆ ಇಟ್ಟಿತು. ಉಳಿದವರ ಕಣ್ಣು ಕೂಡ ನನ್ನ ಕಣ್ಣ ಹಾಗೆ ಆಗಸಕೆ ನೋಟ ಬೀರಿದವು.ಸೂರ್ಯನ ಕಿರಣಗಳ ಸೆರಗಿನಲ್ಲಿ , ಮೋಡಗಳ ಹೊದಿಕೆಯಲ್ಲಿ ಒಂದು ವಿಮಾನ ನುಸುಳಿಕೊಂಡು ಹೋಗುತಿತ್ತು. ಸರಕ್ಕನೆ ವೇಗವಾಗಿ ಬಂದ ಚೆಂಡು ನನ್ನ ಬೆನ್ನಿಗೆ ಬಡಿಯಿತು, ಎಲ್ಲರೂ ನನ್ನ ಹೆಸರಿಡಿದು ಕೂಗಿದರು.
"ರೀ, ಮ್ಯಾನೆಜೆರ್ ಕರೀತಾ ಇದಾರೆ ", ಅಂಥ ಶ್ವೇತ ಬೆನ್ನು ತಟ್ಟಿದಳು .ವರ್ತಮಾನಕ್ಕೆ ಬಂದ ಮನಸ್ಸು ಭ್ರಾಂತಿಯ ಚಿತ್ರವನ್ನು ಅವಳ ಮುಂದಿಟ್ಟವು .
ಇವನು ಉದ್ದಾರ ಆಗಲ್ಲ ಎಂದು ಜರಿದು ತನ್ನ ಕಂಪ್ಯೂಟರ್ ಪರದೆಯಡೆಗೆ ಪಲಾಯನಗೈದಳು.
ಎದ್ದವನೇ ಮುಖಕ್ಕೆ ನೀರು ಎರಚಿಕೊಂಡು, ಬೋಳ್ದಲೇಯ 16 ತಲೆಗೂದಳುಗಳನ್ನು ಸರಿಪಡಿಸಿಕೊಂಡು ಮ್ಯಾನೆಜೆರ್ ಕಾಂ ಚೋರ್ ಕಾರ್ತಿಕನ ರೂಮಿನ ಕಡೆಗೆ ನಡೆದೆ.
ಯಾವಾಗಲು ತಡವಾಗಿ ಬರುವ ಕಾರ್ತಿಕ ಅಂದು ಲಂಚ್ ಗಿಂತ ಮುಂಚೆಯ ಬಂದು ಲ್ಯಾಪ್ಟಾಪ್ ಗುಂಡಿಗಳನ್ನು ಒತ್ತುತಿದ್ದ ದೃಶ್ಯ ನೋಡಿ , ಆಶ್ಚರ್ಯ ಮತ್ತು ಸಂತೋಷ ಕೂಡ ಆಯಿತು.
ಬಾಗಿಲು ತೆಗೆದುಕೊಂಡು ಹೊರಬಂದ ವಿಘ್ನೇಶ್ ಮೂರ್ತಿಯ ಮುಖದಲ್ಲಿ ಎಳ್ಳೆಣ್ಣೆಯ ಗುಣಗಳು ಕಾಣತೊಡಗಿ ,
"ಏನಾಯ್ತುರಿ ?", ಅಂಥ ಅಂದೇ ,
ಅದಾಕೆ ಆ ಅಸಾಮಿ , ಬೇಗ ಕಂಪನಿ ಚೇಂಜ್ ಮಾಡಬೇಕ್ರಿ ಅಂಥ , ತನ್ನ ಬಳ್ಳಾರಿ ಶೈಲಿಯ ಬೈಗುಳದಲ್ಲಿ ಕಾಂ ಚೋರ್ ಕಾರ್ತಿಕನ ಕುಟುಂಬದ ಮೇಲೆ ತೀವ್ರ ವಾಗ್ದಾಳಿ ನಡೆಸಿ
ಕಾಲ್ಕಿತ್ತ .ವಿಘ್ನೇಶ್ನ ಸ್ಥಿತಿ ನೋಡಿ ನನಗೂ ಏನು ತಿಳಿಯಲಿಲ್ಲ . ಇವನ್ದು ಇದ್ದಿದ್ದೆ ಅಂದುಕೊಂಡು ಅವನ ಭಾಷೆಯಲ್ಲೇ ಬ್ಯೆದುಕೊಂಡು ಕಾಂ ಚೋರ್ ಕಾರ್ತಿಕನ ರೂಮಿಗೆ ನುಸುಳಿ , ಹಲ್ಲು ಗಿಂಜಿ
"ಹಾಯ್ ಕಾರ್ತಿಕ್ ",ಅಂದೇ .
ಆ ಗುಣಿ ಬಿದ್ದ ಕಣ್ಣುಗಳನ್ನು ಅಗಲಿಸಿ , ಬನ್ನಿ ಅಂಥ ಅಲ್ಲಿದ್ದ ಕುರ್ಚಿಯ ಕಡೆ ಕೈ ತೋರಿದ.
"ಏನ್ ಕಾರ್ತಿಕ್ , ಬರೋದಕ್ಕೆ ಹೇಳಿದ್ರಂತೆ "
ಅದಕ್ಕೆ ಅವನ ಹಳೆ ಚಾಳಿಯಾದ ಬಿಸಿನೀರನ್ನು ತುಟಿಗೇರಿಸಿ,
"ಎಸ್, ಒಂದು ಅಪ್ಡೇಟ್ ಇದೇ".
"ಎಸ್ ಹೇಳಿ "
"ನಿಮ್ಮ ಆನ್ ಸೈಟ್ ಟ್ರಿಪ್ ಕ್ಯಾನ್ಸಲ್ ಆಗಿದೆ , ಯು.ಎಸ್ ಅಲ್ಲಿ ವೀಸಾ ಪ್ರಾಬ್ಲಮ್ ಆಗಿದೆ "
ದಿಗ್ಬ್ರಾಂತನಾದ ನನಗೆ ವಿಜ್ಞೆಶನು ನನ್ನ ಬಳಿ ಆಡಿದ ,ಅಷ್ಟು ಬೈಗುಳಗಳ ಜೊತೆಗೆ ನನ್ನ ಒಂದಷ್ಟು ಬೈಗುಳಗಳು ಮನಸ್ಸಿನಲ್ಲೇ ಕಾಂ ಚೋರ್ ಕಾರ್ತಿಕನ ರೂಪಕ್ಕೆ ಉಗುಳು ಎರಚಿದವು.
"ಒಹ್ ಇಸ್ ಇಟ್ , ಆದ್ರೆ ನಾನು ಬಹಳ ಚೆನ್ನಾಗಿ ಕೆಲಸ ಮಾಡಿದ್ದೇನೆ , ಮತ್ತೆ ನನ್ನ ಕೆಲಸ ಈಗ ಕಸ್ಟಮರ್ ಗೆ ಬೇಕಾಗಿದೆ , ಈಗ ವೀಸಾ ಇಲ್ಲ ಅಂದ್ರೆ ತುಂಬಾ ಪ್ರಾಬ್ಲಮ್ ಆಗುತ್ತೆ "
ಅವನು , ಏನೋ , ನನ್ನ ಭಾವನೆಗಳನ್ನು ಅರ್ಥ ಮಾಡಿಕೊಂಡವನ ಹಾಗೆ ,
"i understand , these things are not in our hands. But your work will be deeply apperciated by company. keep up the good work" , ಎಂದು ಸೋಪು ಹಾಕತೊಡಗಿದ.
ದುಃಖದ ಊರಿಗೆ ಹತ್ತಿರವಾಗಿದ್ದ ನನ್ನ ಕಣ್ಣುಗಳ ಸೆಲೆ , ನನ್ನ ಹಳೆ ಆಸೆಗಳು ಬೂದಿಯಾಗಿರುವ ಸಮುದ್ರಕ್ಕೆ ನುಗ್ಗಿದವು .
ನಾನು "ಇಟ್ಸ್ ಓಕೆ " ಎಂದು , ಅಲ್ಲಿಂದ ಎದ್ದೆ .
ಅರ್ಧ ದಿನ ರಜೆ ತೆಗೆದುಕೊಂಡು , ಮನೆಗೆ ಬಂದು ಮಲಗಿದೆ .
ಮನಸ್ಸು ಕನಸ್ಸಿನ ಮನೆಗೆ ಓಡಿತು .
ಅದೇ ಲಗೋರಿ ಆಟದ ಕನಸ್ಸು ,ಮ್ಯಾಟನಿ ರೂಪದಲ್ಲಿ ಕಂಡಿತು.
ಆದ್ರೆ , ಈಗ ನನ್ನ ಬೆನ್ನಿಗೆ ಬಡಿದ ಚೆಂಡಿನ ಮುಖದಲ್ಲಿ ಕಾಂ ಚೋರ್ ಕಾರ್ತಿಕನ ರೂಪ ನಗುತ್ತಿತ್ತು.

Wednesday, March 7, 2012
ಸಣ್ಣ ವ್ಯಥೆ -16
ಮಲ್ಯ 2011
-------------
ಹಾರಿ ಬಿಟ್ಟೆ ವಿಮಾನ
ಏರಬಲ್ಲಿರ ,ನೀವು ಏರಬಲ್ಲಿರಾ ||
ಹಣವೇ ಎಲ್ಲಾ ನನ್ನ ಬಳಿ
ಸಂಗಡಕ್ಕೆಲ್ಲಾ ಸುಂದರಿಯರು
ಮುಂಗಡಕ್ಕೆಲ್ಲಾ ಮಂತ್ರಿವರ್ಯರು
ಸತ್ಯ ನಶೆಯೇ ನಿತ್ಯ ದೆಸೆಯೂ ....
-------------
ಹಾರಿ ಬಿಟ್ಟೆ ವಿಮಾನ
ಏರಬಲ್ಲಿರ ,ನೀವು ಏರಬಲ್ಲಿರಾ ||
ಹಣವೇ ಎಲ್ಲಾ ನನ್ನ ಬಳಿ
ಸಂಗಡಕ್ಕೆಲ್ಲಾ ಸುಂದರಿಯರು
ಮುಂಗಡಕ್ಕೆಲ್ಲಾ ಮಂತ್ರಿವರ್ಯರು
ಸತ್ಯ ನಶೆಯೇ ನಿತ್ಯ ದೆಸೆಯೂ ....
ಮಲ್ಯ 2012
--------------
ಏರಿ ಬಿಟ್ಟೆ ವಿಮಾನ
ಹಿಡಿಯಬಲ್ಲಿರ ,ನನ್ನ ಹಿಡಿಯಬಲ್ಲಿರಾ ||
ಹಣವು ಏಕೆ ನನ್ನ ಬಳಿ
ಸರಿದರೆಲ್ಲ ಸುಂದರಿಯರು
ಮಾತಿಗಿಲ್ಲ ಮಂತ್ರಿವರ್ಯರು
ಸತ್ಯ ಭಿಕ್ಷೆಯೇ ನಿತ್ಯ ಭೋಜ್ಯವೂ ...
--------------
ಏರಿ ಬಿಟ್ಟೆ ವಿಮಾನ
ಹಿಡಿಯಬಲ್ಲಿರ ,ನನ್ನ ಹಿಡಿಯಬಲ್ಲಿರಾ ||
ಹಣವು ಏಕೆ ನನ್ನ ಬಳಿ
ಸರಿದರೆಲ್ಲ ಸುಂದರಿಯರು
ಮಾತಿಗಿಲ್ಲ ಮಂತ್ರಿವರ್ಯರು
ಸತ್ಯ ಭಿಕ್ಷೆಯೇ ನಿತ್ಯ ಭೋಜ್ಯವೂ ...
ಕೊನೆಯ ಮಾತು
------------
ಮದ್ಯದ ದೊರೆಗೆ ಮದ ಕಟ್ಟಿಟ್ಟ ಬುತ್ತಿ ಖಾಲಿ
ಬಚ್ಚಿಟ್ಟ ಬುಟ್ಟಿಯ ಖಯಾಲಿ
ಶೋಕಿಗೆ ಮೊರೆ
ಹಾಗಾಗಿ ಈಗ ಕೇವಲ ಶೋಕದ ದೊರೆ ||
-- ಗಂಗರಾಜು.ಕು.ಸಿ.
Friday, December 23, 2011
ಸಣ್ಣ ವ್ಯಥೆ -15
ನಿಂತ ನೀರಿದು ನಿಂತ ನೀರಿದು
ಹರೆಯ ಬಾಳು ಹೊರೆಯ ಹಾಗೆ
ಒಲವ ಮರೆತು ಒಡಲ ಸುಖಕೆ
ನಿಂತ ನೀರಿದು ನಿಂತ ನೀರಿದು ||ಪ||
ಕಲಿವ ಶಿಕ್ಷಣ ಊಟಕಂತೆ
ಕಲಿತ ವಿದ್ಯೆ ಆಟದಂತೆ
ನೆರೆಯ ಪ್ರೀತಿ ಪಾತ್ರಕಾಗಿ
ಸ್ವಂತ ದೇಹ ತೊರೆವರಂತೆ ||ನಿಂತ||
ತಂದೆ ತಾಯಿಯ ಹೊರಗಿನವರು
ತವರ ಬಾಳ್ವೆ ರುಚಿಸದವರು
ಮೂರು ದಿನದ ಬದುಕಿನಲ್ಲಿ
ಯಾರಿಗೂ ನಿಲುಕದೆ ಓಡ್ವರು||ನಿಂತ||
ಮೌನ ಮಂತ್ರ ಮರೆವಿಗೆ
ಮಾತೇ ತಂತ್ರ ಇವರಿಗೆ
ಅಳಿಸಿ ಹೋಗುವ ಬಾಳ್ವೆಯಲ್ಲಿ
ಅಂಧಕಾರದಿ ಮೆರೆವರು ||ನಿಂತ||
ಹಣವೇ ಎಲ್ಲವು ಆಗಿದೆ
ಸ್ನೇಹ ಸರಸವು ಮಾಯವು
ಉಸಿರು ಉಸಿರಿಗೂ ಮಧ್ಯದಲ್ಲಿ
ಸುಳ್ಳ ಹೇಳಿ ಜೀವಿಪರು ||ನಿಂತ|
-- ಗಂಗರಾಜು.ಕು.ಸಿ.
ಹರೆಯ ಬಾಳು ಹೊರೆಯ ಹಾಗೆ
ಒಲವ ಮರೆತು ಒಡಲ ಸುಖಕೆ
ನಿಂತ ನೀರಿದು ನಿಂತ ನೀರಿದು ||ಪ||
ಕಲಿವ ಶಿಕ್ಷಣ ಊಟಕಂತೆ
ಕಲಿತ ವಿದ್ಯೆ ಆಟದಂತೆ
ನೆರೆಯ ಪ್ರೀತಿ ಪಾತ್ರಕಾಗಿ
ಸ್ವಂತ ದೇಹ ತೊರೆವರಂತೆ ||ನಿಂತ||
ತಂದೆ ತಾಯಿಯ ಹೊರಗಿನವರು
ತವರ ಬಾಳ್ವೆ ರುಚಿಸದವರು
ಮೂರು ದಿನದ ಬದುಕಿನಲ್ಲಿ
ಯಾರಿಗೂ ನಿಲುಕದೆ ಓಡ್ವರು||ನಿಂತ||
ಮೌನ ಮಂತ್ರ ಮರೆವಿಗೆ
ಮಾತೇ ತಂತ್ರ ಇವರಿಗೆ
ಅಳಿಸಿ ಹೋಗುವ ಬಾಳ್ವೆಯಲ್ಲಿ
ಅಂಧಕಾರದಿ ಮೆರೆವರು ||ನಿಂತ||
ಹಣವೇ ಎಲ್ಲವು ಆಗಿದೆ
ಸ್ನೇಹ ಸರಸವು ಮಾಯವು
ಉಸಿರು ಉಸಿರಿಗೂ ಮಧ್ಯದಲ್ಲಿ
ಸುಳ್ಳ ಹೇಳಿ ಜೀವಿಪರು ||ನಿಂತ|
-- ಗಂಗರಾಜು.ಕು.ಸಿ.
Wednesday, December 21, 2011
ಸಣ್ಣ ವ್ಯಥೆ -14
ದೂರ ದೂರಕೆ ,ತೀರದ ಆಚೆಗೆ ಬಾಲ್ಯವ ಮರೆತು , ದುಡಿಮೆಯ ಬಯಸಿ||
ಜನನವೇ ಇವರಿಗೆ ಮೃತ್ಯುವಾಗಿದೆ
ಸಲಹುವವರು ಸುಳಿವಿಲ್ಲದೆ ಸರಿದಿದ್ದಾರೆ
ಬದುಕ ಕಟ್ಟಲು ಬಯಕೆಗಳಿಲ್ಲ
ಹೊತ್ತಿನ ತುತ್ತಿಗೆ ಹವಣಿಸುತ್ತಿದ್ದಾರೆ
ಮರೆಯಲು ಇವರಲಿ ನೆನಪುಗಳಿಲ್ಲ
ಸವಿಯಲು ಸುಂದರ ಸಂಜೆಗಳಿಲ್ಲ
ದಿನವು ಕಣ್ಣಿರಲಿ ಮಿಂದು
ಕಂಠದಲಿ ದುಃಖವ ಮಿಡಿದಿಹರು
ದಿನದ ಕೂಲಿಯೇ ಇವರ ಶಿಕ್ಷಣ
ಬೈಗುಳವೇ ಇವರಿಗೆ ಪಾಠ ಪ್ರವಚನ
ಆಡಲು ಒಡನಾಡಿಗಳಿಲ್ಲ
ಅಗುಳು ಲೆಕ್ಕಿಸಿ ಉಣ್ಣುವ ಬದುಕು
ಬೈಗುಳವೇ ಇವರಿಗೆ ಪಾಠ ಪ್ರವಚನ
ಆಡಲು ಒಡನಾಡಿಗಳಿಲ್ಲ
ಅಗುಳು ಲೆಕ್ಕಿಸಿ ಉಣ್ಣುವ ಬದುಕು
ಹುಟ್ಟಿಸಿದ ಅಪ್ಪ ಸಾರಾಯಿ ಅಂಗಡಿಯ ಖಾಯಂ ಸದಸ್ಯ
ಅಮ್ಮನೋ ಇನ್ನೊಂದು ಅನರ್ಥ ಶಿಶುವಿನ ಗರ್ಭಿಣಿ
ದಾಯಾದಿಗಳೋ ದಿಕ್ಕು ದಿಕ್ಕಿಗೆ ಓಡಿ ಹೋಗಿದ್ದಾರೆ
ನೆರಹೊರೆಯವರ ಮೆಚ್ಚಿನ ಸೇವಕನಾಗಿಹನು
ಬಡತನವ ಬಣ್ಣಿಸಲು ಇವನೇ ಆಗಿಹನು
ಇವನ ದಾಸ್ಯದ ದಣಿವ ತೀರಿಸಲು ಯಾರಿಹರು
ಇಂತಹವರ ಬಾಲ್ಯಕ್ಕೆ ಬೆಳಕನಿರ್ವರು ಯಾರು
ನೆಲೆಯೇ ಇಲ್ಲದವರ ನಲಿವು ಹೇಗೆ
ಬಾಲ್ಯವೇ ನೀನೇಕೆ ಈ ಮಕ್ಕಳಿಗೆ ಸುಂದರವಾಗಿಲ್ಲ ?
ದೂರ ದೂರಕೆ ,ತೀರದ ಆಚೆಗೆ
ಬಾಲ್ಯವ ಮರೆತು , ದುಡಿಮೆಯ ಬಯಸಿ||

-- ಗಂಗರಾಜು.ಕು.ಸಿ
Friday, December 9, 2011
ಸಣ್ಣ ವ್ಯಥೆ -13
ಅಂದು ಸೂರ್ಯೋದಯ ಕೊಂಚ ತಡವಾಗಿಯೇ ಆದ ಹಾಗೆ ತಿಮ್ಮನಿಗೆ ಅನ್ನಿಸಿತು,ಎದ್ದವನೇ ಗೋ ಶಾಲೆಗೆ ಹೋಗಿ ಬಸಪ್ಪನ ಕಾಲಿಗೆ ಬಿದ್ದು ,ಅಮ್ಮಿ ಮಾಡಿದ್ದ ಇಟ್ಟು ತಿಂದು ಮಡಿಕೆ ಕಟ್ಟಿದ.ಎಂದೂ ಟೈಮ್ ಗೆ ಬಾರದ ಉದಯ ರಂಗ ಬಸ್ಸು ಪೂಮು ಪೂಮು ಎಂದು ಸದ್ದು ಮಾಡುತ್ತಾ ಧೂಳು ಎಬ್ಬಿಸಿಕೊಂಡು ಪಟೇಲರ ಮನೆ ಮುಂದಿನ ಖಾಲಿ ಜಾಗದಲ್ಲಿ ನಿಂತಿತು.ತಿಮ್ಮ ಚುರಾಕಾಗಿ ಮೊದಲ ಸಾಲನ್ನು ಚಕ್ಕನೆ ಉತ್ತು ಬಿಟ್ಟು , ಎರಡನೇ ಸಾಲಿಗೆ ಅಣಿಯಾಗುತ್ತಿದ್ದ.ಬಸ್ಸಿನಿಂದ ಇಳಿದ ಟಪಾಲಪ್ಪ , ನೇರವಾಗಿ ಪಟೇಲಪ್ಪನ ಮನೆಗೆ ನುಗ್ಗಿದ . ತಿಮ್ಮನ ಮಕ್ಕಳು ಅಮ್ಮಿ ಮಾಡಿದ ಅದೇ ಇಟ್ಟನ್ನು ನುಂಗಿ, ಹರಿದ ನಿಕ್ಕರಿಗೆ ಪಿನ್ ಹಾಕಿಕೊಂಡು, ಕೆರೆ ಪಕ್ಕದ ಈರಪ್ಪನ ಗುಡಿಗೆ ಸ್ಲೇಟ್ ಹಿಡಿದು ಕೊಂಡು ಹೋದರು .ಟಪಾಲಪ್ಪ ಕೊಟ್ಟ ಉತ್ತರವನ್ನ ಓದಿದ ಪಟೇಲಪ್ಪ, ಹುಂಜನಿಗೆ ಊರಿನ ಎಲ್ಲರಿಗು ತಕ್ಷಣ ಬುಲಾವ್ ಕೊಡಲು ಹೇಳಿದ. ತಿಮ್ಮ ಅಷ್ಟು ನೆಲವನ್ನು ಹಸನು ಮಾಡಿ , ಬದಿಗಳಲ್ಲಿ ಬೆಳೆದ ಕಾಂಗ್ರೆಸ್ ಗಿಡಗಳನ್ನು ಕೀಳ ತೊಡಗಿದ್ದ .
ಊರಿನ ಹಿರಿಯರೆಲ್ಲ ಪಟೇಲಪ್ಪನ ಮನೆ ಮುಂದೆ ಸಭೆ ಸೇರಿದರು.
"ಇನ್ನು ಮ್ಯಾಲೆ ನಮ್ಗೆ ಸರ್ಕಾರ ಬೀಜ , ಗೊಬ್ಬರ ರಿಯಾಯಿತಿ ಧರದಲ್ಲಿ ಕೊಡಾಕಿಲ್ಲ" ಅಂಥ ಮಾತು ಮುಗಿಸಿದರು.
ತಿಮ್ಮ ಎಷ್ಟು ಕಿತ್ತರು ಕಾಂಗ್ರೆಸ್ ಗಿಡಗಳು ಮಾತ್ರ ನೆಲಸಮವಾಗಲಿಲ್ಲ.
--
ಗಂಗರಾಜು .ಕು.ಸಿ.

Subscribe to:
Posts (Atom)