Sunday, May 8, 2011

ಒಂದು ಅಸ್ಪಷ್ಟ ಲೇಖನ - ಭಾಗ ೧

ಏನೋ  ಮಾಡಲು ಹೋಗಿ ,
ಏನು ಮಾಡಿದೆ ನೀನು ..... ಈ ಸಾಲುಗಳು ನಮ್ಮ ದಿನ ನಿತ್ಯದ ಕೈಂಕರ್ಯ ಗಳನ್ನು  ನೆರವೇರಿಸುವಾಗ , ನಮ್ಮ ಮನಸಿನಲ್ಲಿರುವ ಪಕ್ಷಿ ಹೇಳಿರುತ್ತದೆ ಆಲ್ವಾ ? , ಆ ಸ್ಥಿತಿ ಹೇಗೆ ಒಂದು ಪರಿಸ್ಥಿತಿಯಾಯಿತು ಎಂದು ನಾವು ಊಹಿಸಲು ಸಾಧ್ಯವಿಲ್ಲದಷ್ಟು , ಹಳಸಿಹೋಗಿದ್ದಾಗ , ಈ ಎರಡು ಸಾಲುಗಳು ಮನದ ಪಟಲದಲ್ಲಿ ರಾಗವಾಗುತ್ತ ದೂರವಾಗುವುದು ಆಲ್ವಾ ?

   ಚಿತ್ರ ವಿಚಿತ್ರಗಳ ತಾಣವಾಗಿರುವ ನಮ್ಮ ಮನ , ಪ್ರಾಣ ಎಂಬ ಮಾಯಾ ಜಿಂಕೆಯನು ಉಳಿಸಲು ,ರಕ್ಷಿಸಲು , ಬೆಳೆಸಲು , ಇಲ್ಲದ - ಸಲ್ಲದ - ಒಲ್ಲದ ಎಲ್ಲ ಕೆಲಸಗಳನ್ನು ಮಾಡಿಸುವುದು . ಕೊನೆಗೆ ನೊಂದು-ಬೆಂದು , ನಾವು ನಮ್ಮ ತಾಣವನ್ನು ಕಳೆದುಕೊಂಡಿರುವ ಮಾದರಿಗಳೆಸ್ತೋ .

    ಗಳಿಸಲು - ಗೆಲ್ಲಲು - ಲೋಭದಿ - ಮೋಹದಿ ,ನಮ್ಮ ಮನ ತನ್ನ ಮಡದಿಯಾದ ದೇಹದಿಂದ ದುಷ್ಟ- ಅಸ್ಪಷ್ಟ ಕಾಯಕ ಗಳನ್ನೂ ಮಾಡಿಸಲು ಹಿಂಜರೆಯುವುದಿಲ್ಲ .  ಮಾದರಿಯಾಗಬೇಕದವನೇ/ಳೇ ಮಾನ - ಮರ್ಯಾದೆ ಕಳೆದುಕೊಂಡು , ಮೌನದಿ ಮರೆಯಾಗಬೇಕಾಗುವ ಪ್ರಸಂಗಗಳನ್ನು ನಾವು ಕಂಡಿದ್ದೇವೆ , ನೋಡಿದ್ದೇವೆ ಅಥವಾ ಮೀರಿ ಅನುಭವಿಸಿರುತ್ತೇವೆ .
   
    ಅಲ್ಲಿಗೆ ನಮ್ಮ ಮನವೇ ,ನಮ್ಮ ನಾಶಕ್ಕೆ ಕಾರಣವೇ ?
ನಮ್ಮ ಕರ್ಮದಿ, ನಮ್ಮ ಕಾಯಕದಿ , ನಮ್ಮ ಉಳಿವು -ಗೆಲುವು -ಒಲವು , ಅಡಗಿದೆಯೇ ?
ಅರಿಷಡ್ವರ್ಗಗಳು , ನಮ್ಮನ್ನು ಮಣ್ಣ ಸೇರಿಸಲು ಹೊಂಚು ಹಾಕುತ್ತಿರುತ್ತವೆಯೇ ?
ಈ ಮೇಲಿನ ತ್ರಿಪದಿಗೆ ನನ್ನಲ್ಲಿ ಉತ್ತರವಿದೆಯೇ ? , ಎಂದು ಒಮ್ಮೆ ಯೋಚಿಸಿದಾಗ ................................
ಉದರದ ಮೇಲ್ಭಾಗದಲ್ಲಿ ಒಂದು ಸಣ್ಣ ಆತಂಕದ ಛಾಯೆ .  ಅಸೂಯೆ ,ಕಿಚ್ಚು ಎಂಬ ಎಲ್ಲ ಹೊಲಸುಗಳು , ನಮ್ಮಲ್ಲಿ ಭಯ ಎಂಬ ಭೂತವನ್ನು ಅರಸನನ್ನಾಗಿಸುತ್ತವೆ.

ಏನಿದು ಭಯ , ಎಲ್ಲಿಯದು ಭಯ , ಹೇಗಿರುವುದು ಈ ಭಯ , ಎಂದು ಯಾರು ಪ್ರಶ್ನೆ ಕೇಳಿಕೊಳ್ಳಲು ಸಾಧ್ಯವಿಲ್ಲ , ಕಾರಣ
ಎಲ್ಲರಿಗು ಉತ್ತರ ತಿಳಿದೇ ಇರುತ್ತದೆ .

ಭವನವಿಲ್ಲದವ ಭಯವ ಗೆದ್ದಾನು ,
ಭಯವಿಲ್ಲದವ ಭೂಮಿಯ ಗೆದ್ದಾನು ...

ಭವನ ಎಂದರೆ ಆಸೆ , ಲೋಭ , ಮೋಹ ಎಲ್ಲವು ಅಡಗಿರುವ ಒಂದು ಮಾಯಾಲೋಕ .

ಬಹಳಸ್ಟು ಸ್ನೇಹಿತರು (ನನ್ನನು ಸೇರಿಸಿಕೊಂಡು ), ಭಯದಿ ಭರವಸೆಯ ಕಳೆದುಕೊಂಡು , ದುಷ್ಟ  ಕಾರ್ಯಗಳಲ್ಲಿ ಕೈ ಜೋಡಿಸಿಕೊಂಡು , ಆತಂಕದಿ - ಅವಸರದಿ ಕಾರ್ಯಗಳ ಮಾಡಿಕೊಂಡು ನಾಟಕೀಯ ಜೀವನವನ್ನು ನಡೆಸುತ್ತಿದ್ದಾರೆ .

ಅಲ್ಲಿಗೆ ಮನುಷ್ಯನಿಗೆ ಭಯದ ಅವಶ್ಯಕತೆ ಇಲ್ಲವೇ ?
ಅಂದರೆ ಭಯವೇ ಬೇಕಾಗಿಲ್ಲವೇ ?
ಈ ಕ್ಷಣಕ್ಕೆ ನನ್ನ ಉತ್ತರ ಕೂಡ ಭಯದಿಂದಲೇ ಹೇಳಬೇಕಾಗಿದೆ .

ಭಯ ಬೇಕು ,ಭಯ ಬೇಕು
ಬೆಳಕನ್ನು ಸೇರಲು , ಭಯದ ನೆರಳು ಬೇಕು .
ಭರವಸೆಯ ನೀರಲು , ಭಯದ ಬಯಕೆ ಬೇಕು .
ಬದಲಾಗಲು , ಭಯದ ಜೊತೆ ಬೇಕು .
ಭಯ ಬೇಕು ,ಭಯ ಬೇಕು .
ಹುಟ್ಟುತ್ತಲೇ ಎಲ್ಲರು ಬುದ್ದಿವಂತರಾಗಿದ್ದರೆ , ಸ್ವತಂತ್ರ ವಾಗಿ ಜೀವಿಸಲು ಸಾಧ್ಯವಿದ್ದಿದ್ದರೆ , ನಮ್ಮ ಸುತ್ತಮುತ್ತಲಿನ ಪರಿಸರವೂ ಸತ್ಯಾ-ನಿಷ್ಟೆ ಇಂದ ಕೂಡಿದ್ದರೆ , ಭಯವೇತಕೆ ಭೂಮಿಯ ಮೇಲೆ ಜೀವಿಸಲು ಎಂದು ಹೇಳಬಹುದಿತ್ತು .  ಆದರೆ ಇಲ್ಲಿ ಇರುವುದು , ಮೂಢರು ತುಂಬಿದ ಸಮಾಜ , ಮೌದ್ಯಥೆಯ ಮಡಿಲು ನಮ್ಮ ಸುತ್ತ ಮುತ್ತಣಗಳು. ಅವಸರ - ಐಶ್ವರ್ಯಕ್ಕೆ , ಆರ್ಯರು -ಅರಸರು ದುರುಳರಾಗುವ ಕಾಲವಿರುವಾಗ , ಭಯ ಬೇಕಲ್ಲವೇ ?

ಅದು ಎಂಥಹ ಭಯ , ಭಯ ಹೇಗಿರಬೇಕು ?

ಆಗ ತಾನೇ ತಾಯಿಯ ಗರ್ಭ ಕೋಶದಿಂದ , ತಾಯಿಯ ಮಡಿಲು ಸೇರಿದ ಮಗು , ಕಿರುಚುತ್ತದೆ . ಅದು ಕೂಡ ಒಂದು ಲೋಕದಿಂದ , ಇನ್ನೊಂದು ಹೊಸ ಮರ್ಮ ಲೋಕಕ್ಕೆ ಬಂದೆನೆಂಬ ಭಯದಿಂದ , ಈ ಭಯ ನಮಗೆ ಬೇಕು , ಈ ಭಯದಲ್ಲಿ ಒಂದು ಸಣ್ಣ ಅರಿವಿದೆ ಮತ್ತು ಮುಗ್ಧತೆಯ ಮೂಲರೂಪವಿದೆ .

ಭಯ ಬಹುರೂಪಿ .

ಬೆಳಕಿಗೆ ಬಂದ ಮಗು , ಭಯವೇ ಇಲ್ಲದ ಹಾಗೆ ಬೆಳಯಲು-ಬೆಳೆಸಲು ಸಾಧ್ಯವಿಲ್ಲ .
ಮಗುವಾದ್ದರಿಂದ ಒಂದು ಆರೋಗ್ಯಕರ ಭಯವೆಮ ವಾತವರಣದಲ್ಲಿ ಬೆಳೆಯಬೇಕಾಗಿರುತ್ತದೆ , ಆದರೆ ಈಗ , ಆರೋಗ್ಯಕರ ಮಾಯವಾಗಿ , ಮಕ್ಕಳು ಮೂಧರಾಗಿ ಬೆಳೆಯುತ್ತಿದ್ದಾರೆ . ನಮ್ಮ ನಾಳೆಯ ಪ್ರಜೆಗಳು ಒಂದು ಸಣ್ಣ ಗತಿಯನ್ನು ಎದುರಿಸಲು ಕಣ್ಣಲ್ಲಿ ಕೊಡಿ ಹರಿಸುತ್ತಿದ್ದಾರೆ.

ಈ ಭಯ ಬೇಡ ನಮಗೆ .
ಮುಂದುವರೆಯುವುದು ....
ನಿಮ್ಮ ಅಭಿಪ್ರಾಯ(ಸದಾಭಿಪ್ರಾಯ  ಅಥವಾ ದುರಾಭಿಪ್ರಾಯ :)ಗಳನ್ನು  ತಿಳಿಸಿ .
 
ಇಂತಿ ನಿಮ್ಮ 
ಗಂಗ




Thursday, April 28, 2011

ಅಭಿಮಾನಿಯ ಮನದಲ್ಲಿ ...

  ಏನೋ  ಮನಸ್ಸಿಗೆ ನಿರಾಳ, 
ಬೇಸರದಲ್ಲೂ ಸಂತಸದ ಅವಸರ ಬಂದಿತು ಇವರ ನೆನೆದರೆ ,
ಉತ್ಸಾಹದ ಸೆಲೆ ಆ ರೂಪ ,
ನಮ್ಮೆಲರ ಕಥಾನಾಯಕ , 
ಅವರು ಏನೇ ಹೇಳಲಿ , ಅದು ನಮಗೆ ಸಾರ್ವಕಾಲಿಕ ಸತ್ಯ ,
ಅವರೇ ನಮ್ಮ ಪ್ರೀತಿಯ ರಸಿಕರ ರಾಜ ಡಾ  || ರಾಜ್ ಕುಮಾರ್ .

ಸಿಂಗನಲ್ಲುರ್ ಮುತ್ತುರಾಜ್  ಮುಂದೆ ಪ್ರತಿ ಕಲಾ ರಸಿಕನ ,ಮನದ ಕಲಾ ರಾಜನಾಗುತ್ತರೆಂದು ಯಾರು ಭಾವಿಸಿರಲಿಲ್ಲ , ಆದರೆ ಪ್ರಸ್ತುತ ನಮ್ಮ ಭಾಗ್ಯ , ಅವರು ಈಗ ನಟ ಸಾರ್ವಭೌಮ .

ರಾಜಣ್ಣ ನಮಗೆಲ್ಲರಿಗೂ ದ್ರೋಣ ಚಾರ್ಯ ರಂತೆ , ಅವರ ಚಿತ್ರಗಳೇ , ಅವರ ಸಾರ್ಥಕ  ಜೀವನವೆ  . ಅವರ ಹಾವ ಭಾವವೇ , ಅವರ ಮಾತು  ಮತ್ತು  ಅವರ ಕನ್ನಡ ಪ್ರೇಮವೇ ನಮಗೆ ಪರಿಮಿತಿ ಇಲ್ಲದ ಪಾಠ ಗಳು .

ಅವರ ಈ ಚಿತ್ರ ಸರಿ ಇಲ್ಲ ,  ಇದು ಸುಮಾರಾಗಿದೆ , ಅಂತ ಹೇಳಲು ಚಿತ್ರಗಳನ್ನು ನೋಡಿರುವ ಯಾವ ಅಭಿಮಾನಿಯೂ ಒಪ್ಪಲ್ಲ . ಇಂದಿಗೂ ಆ ಎಲ್ಲ ಚಿತ್ರಗಳೇ ನಮ್ಮ ಟಿವಿ ಪರದೆಯ ಹೂ ಗಳು .

ಒಮ್ಮೆ ನನಗೆ ಬೇಜಾರಾಗುತ್ತದೆ , ದುಖ ವಾಗುತ್ತದೆ , ಕಾರಣ ನಾನು ಸ್ವತಂತ್ರ ನಾಗಿ ಸಿನೆಮ ನೋಡೋಹೊತ್ತಿಗೆ  ರಾಜ್ ರ ಯಾವ ಹೊಸ ಚಿತ್ರವೂ ಬಿದುಗಡೆಯಗಲಿಲ್ಲವಲ್ಲ ಎಂಬ ಕೊರಗು . ಅವರ ಕೊನೆ ಚಿತ್ರ ಶಬ್ದವೇಧಿ ಬಿಡುಗಡೆಯಾದಾಗ ನಾನು ೭ ನೆ ತರಗತಿಯಲ್ಲಿ ಓದುತಿದ್ದೆ , ಆಗ first day  first  show ಅಂದ್ರೆ ಮನೆಯಲ್ಲಿ ಬೈಗುಳದ ಮಂತ್ರಾಕ್ಷತೆ ಬೀಳುತ್ತಿದ್ದವು .
ಆದರೆ ನಾನು ಪದವಿ ಓದುವ ಸಂದರ್ಭದಲ್ಲಿ "ಸತ್ಯ ಹರಿಶ್ಚಂದ್ರ " ಚಿತ್ರವನ್ನು ನವರಂಗ್ ಚಿತ್ರಮಂದಿರದವರು "ಕಲರ್ ಸ್ಕೋಪೆ" ಗೊಳಿಸಿ ಮರು ಬಿಡುಗಡೆ ಮಾಡಿದರು . ಆಗ ನನ್ನ ಕೊರಗು , ಕೋರಿಕೆ ಯಾದ , ಅಣ್ಣನ ಚಿತ್ರವನ್ನು   first day  first  show  ನೋಡಿ ಆನಂದಿಸಿದೆ . ಆ ದಿನ ನನ್ನ ಸಂತೋಷಕ್ಕೆ ಪಾರವೇ ಇಲ್ಲ .

ನಾನು ರಾಜ್ ರ ಎಲ್ಲ ಚಿತ್ರ ಗಳ ಬಗ್ಗೆ ಬರೆಯಬಹುದು , ಆದರೆ ಈ blogspot ನವರ ಬಳಿ ಅಸ್ತು ಮಾಹಿತಿ ಇಟ್ಟುಕೊಳ್ಳಲು , ಇವರ ಬಳಿ ಸ್ಥಳದ  ಅಭಾವ ಇದೆ :) , ಹಾಗಾಗಿ ಅವರ ಮೂರ ಚಿತ್ರಗಳ ಬಗ್ಗೆ , ನನ್ನ ಅಭಿಮಾನದ  ದೃಷ್ಟಿ ಇಂದ ಬರೆಯುತ್ತೇನೆ .

ಚಿತ್ರ ೧ )  ರಾಜ್ ರ ಈ ಚಿತ್ರ ಎಂದರೆ ನನಗೆ ಬಹಳ ಇಷ್ಟ , ನನ್ನ ಬ್ಯಾಗಿನಲ್ಲಿ ಈ ಚಿತ್ರದ ಸಿಡಿ ಸದಾ ಇರುತ್ತದೆ . ಈ ಚಿತ್ರದಲ್ಲಿ ರಾಜ್ ರವರ ಪ್ರಸ್ತಾಪಿಸದ ವಿಷಯವಿಲ್ಲ .
ಚಿತ್ರ "ಕಾಮನಬಿಲ್ಲು" ,
ಸ್ನೇಹಿತರೆ , ನೀವು ಯಾರಾದರು ಈ ಚಿತ್ರ ನೋಡಿರದೆ ಇದ್ದರೆ ದಯವಿಟ್ಟು ಇಂದೇ ಸಿಡಿ ಖರಿದಿಸಿ ನೋಡಿ. ಚಿತ್ರ ನೋಡಿದ ಮೇಲೆ ,ನಿಮ್ಮಲ್ಲಿ ಒಂದು ಸುಂದರ ಸ್ವಪ್ನ ಕಂಡಂತಹ ಭಾವನೆ ಮೂಡುತ್ತದೆ .
ಚಿತ್ರದಲ್ಲಿ ರಾಜಣ್ಣನ ಅಭಿನಯ , ಅದು ಪ್ರತಿಯೊಬ್ಬ ಮನುಷ್ಯನ ಸಹಜ  ಸ್ಥಿತಿ ಮತ್ತು ಸ್ವಾಭಾವಿಕ .
ಈ ಚಿತ್ರದಲ್ಲಿ "ಸ್ನೇಹದ " ಬಗ್ಗೆ , "ಯೋಗ ಬ್ಯಾಸದ" ಬಗ್ಗೆ , "ನೇಗಿಲ ಯೋಗಿಯ" ಬಗ್ಗೆ , "ಪ್ರೀತಿಯ " ಬಗ್ಗೆ ,
"ತ್ಯಾಗದ " ಬಗ್ಗೆ , "ಪರೋಪಕಾರದ " ಬಗ್ಗೆ , "ಪ್ರತಿಭಾ ಪಲಯಾನದ "   ಬಗ್ಗೆ , ಹೀಗೆ ಹತ್ತು ಹಲವಾರು ವಿಷಯಗಳ ಬಗ್ಗೆ ಮನ ಮಿಡಿಯುವ ಚಿತ್ರ ಕಥೆ ಇಂದ , ಸಿನೆಮ ನೋಡುಗನ ಮನಕ್ಕೆ  ಓರೆ ಹಚ್ಚಲಾಗಿದೆ .  
ಚಿತ್ರದಲ್ಲಿ ರಾಜಣ್ಣನ ಪಾತ್ರವಾದ "ಸೂರಿ " , ನಮ್ಮೆಲರ ಜೀವನದಲ್ಲಿ ಹೊಸ ಚೇತನ ವಾಗಿ ಉಗಮವಾಗುವನೆಂದರೆ  ತಪ್ಪಾಗಲಾರದು . 
ರಾಷ್ಟ್ರ ಕವಿ ಕುವೆಂಪು ರವರ "ನೇಗಿಲ ಯೋಗಿ " ಹಾಡು ಮನ ಮುಟ್ಟುತ್ತದೆ , ಮತ್ತು ಅರ್ಥ ಪೂರ್ಣ ರೀತಿಯಲ್ಲಿ ಬಳಸಿಕೊಳ್ಳಲಾಗಿದೆ.

ಚಿತ್ರ ೨ ) ಇದು ರಾಜಣ್ಣ ನಮಗೆಲ್ಲರಿಗೂ ಕೊಟ್ಟಿರುವ ಒಂದು ಉಡುಗೊರೆ ,ಚಿತ್ರದ ಶೀರ್ಷಿಕೆ "ಎರಡು ಕನಸು " .
ಇದು ತ್ರಿವೇಣಿ ಯವರ  ಕಾದಂಬರಿ ಆಧಾರಿತ  ಚಿತ್ರ , ಮೂಲ ಕಥೆಯನ್ನ ಚಿತ್ರದಲ್ಲಿ ಕೊಂಚ ಮಾರ್ಪಾಟು ಮಾಡಲಾಗಿದೆ , ಕಾದಂಬರಿಯಲ್ಲಿ ನಾಯಕನ ಜೀವನದಲ್ಲಿ ,ಎರಡು ಕನಸುಗಳಾಗಿಯೇ ಉಳಿಯುತ್ತವೆ , ಆದ್ರೆ ಚಿತ್ರದಲ್ಲಿ , happy ending ನೀಡಲಾಗಿದೆ , ಆದರು ಚಿತ್ರದ ಹೆಸರು ಸೂಕ್ತ ವಾಗಿಯೇ ಇದೆ.
ರಾಜಣ್ಣ ನ ಅಭಿನಯವನ್ನ  , ಈಗಿನ ಕಾಲದ ಎಲ್ಲ ಭಗ್ನ ಪ್ರೇಮಿಗಳು ನೋಡಲೇ ಬೇಕು . ತೆರೆಯ ಮೇಲೆ ರಾಜಣ್ಣ ನಮ್ಮೆಲರ ಮನ ತುಂಬುತ್ತಾರೆ . ಒಂದು ಉತ್ತಮ ಚಿತ್ರ ನೋಡಿದೆವೆಂಬ ಹಿರಿಮೆ ನಮ್ಮದು .
ನಾನು ಈ ಚಿತ್ರವನ್ನು ಪ್ರಥಮ ಬಾರಿಗೆ ನೋಡಿದ್ದು " ಡಿಡಿ ೧" ರ ಕೃಪಯಿಂದ , ಅದು ಆಗ ಪ್ರಸಾರವಾಗಿದ್ದು ಮಧ್ಯ ರಾತ್ರಿ ೨ ರಿಂದ ೫ ಗಂಟೆ ಯವರೆಗೆ ಎಂದು ನನ್ನ  ಸ್ಮೃತಿ ಈ ಕ್ಷಣಕ್ಕೆ ಹೇಳುತ್ತಿದೆ . ಏನಪ್ಪಾ ಈ ಹೊತ್ತಿನಲ್ಲಿ ಈ ಬಡ್ಡಿ ಮಗ , ಈ ಚಿತ್ರ ಯಾಕೆ ನೋಡಿದ ಅಂತಿರ , ಕಾರಣ ಇಸ್ಟೇ . ಆಗ ಮತ ಎಣಿಕೆ ಕಾರ್ಯ ನಡೀತಾ ಇತ್ತು , ಹಾಗಾಗಿ ಜನರೆಲ್ಲಾ ತಮ್ಮ ತಮ್ಮ ಕ್ಷೇತ್ರದ ಶಾಸಕರ ಬಗ್ಗೆ ತಿಳಿಯಲಿ ಎಂಬ ದೂರದೃಸ್ತಿ ಇಂದ  ಚಿತ್ರ ಪ್ರಸಾರ  ಮಾಡಿದ್ದರು , ಈ ಸನ್ನಿವೇಷ ನಡೆದದ್ದು ೧೯೯೬ ರಲ್ಲಿ :) 

ಚಿತ್ರ ೩) ರಾಜಣ್ಣ ರ ಈ ಚಿತ್ರ ದ ಬಗ್ಗೆ ನಾನು ಬರೆಯಲೇ ಬೇಕು . ಈ ಚಿತ್ರದ ಬಗ್ಗೆ ಎಲ್ಲರು , ಇದು ಇಷ್ಟು ದಿನ ಚಿತ್ರ ಮಂದಿರದಲ್ಲಿ ಓಡಿದೆ , ಇದು ಇಂಥಹ ದಾಖಲೆ , ಅಂಥಹ ದಾಖಲೆ ಎಂದು ಬೀಗುತ್ತಾರೆ .
 ನನ್ನ ಪ್ರಕಾರ , ಈ ಚಿತ್ರ ಒಂದು ಸಾರ್ವಕಾಲಿಕ  ಸತ್ಯ , ಮರಳಿಗೂಡಿಗೆ   ಎಂದು .
ಬಹುಷಃ ಚಿತ್ರದ ಹೆಸರು , ನಿಮಗೆ ಗೊತ್ತಾಗಿದೆ , ಹೌದು ಇದು " ಬಂಗಾರದ ಮನುಷ್ಯ " .
ಇದು ಕೂಡ ಕಾದಂಬರಿ ಆಧಾರಿತ ಚಿತ್ರ , ಅತ್ಯುತ್ತಮ ಚಿತ್ರ ಕಥೆ ಇಂದ ರೂಪು ಗೊಂಡ ಒಂದು ಉತ್ತಮ ಚಿತ್ರ .
ಈ ಚಿತ್ರ ದಲ್ಲಿ "ರಾಜೀವ " ನಾಗಿ ರಾಜಣ್ಣ ನಮ್ಮ ಕಣ್ಣು ಕಟ್ಟುತ್ತಾರೆ .
ರಾಜಣ್ಣ , ಬಾಲಣ್ಣ ಮತ್ತು ಭಾರತಿ ಯವರು ಉತ್ತಮವಾದ ಅಭಿನಯ ನಮ್ಮ ಮನಸೂರೆ ಗೊಳ್ಳುತ್ತದೆ .
ಪಟ್ಟಣದಲ್ಲಿ ಕೆಲಸ ಮಾಡುತಿದ್ದ ಎಸ್ಟೋ ರೈತರ ಮಕ್ಕಳು , ಮರಳಿ ಬೇಸಾಯಕ್ಕೆ ಮರಳಿದರು ಎಂಬುದು  , ಈ ಚಿತ್ರದ ಪರಿಣಾಮ .

ಎಂತಹ ಅದ್ಭುತ ಚೇತನ ಅಣ್ಣಾವ್ರ ಚಿತ್ರಗಳು , 
ಪ್ರತಿ ಅಭಿಮಾನಿಯ ಚಿಂತನೆ ಗಳೆಲ್ಲವೂ , ರಾಜ್ ರವರ ಯಾವುದೋ ಚಿತ್ರದಿಂದ ಪ್ರೇರೇಪಿತವಾಗಿಯೇ ಇರುತ್ತವೆ .

ನೀವು ದಯವಿಟ್ಟು ಈ ವೀಡಿಯೊ ಗಳನ್ನೂ ನೋಡಿ , ರಾಜರ ಚಿತ್ರಗಳು ಏನು , ಹೇಗೆ , ಎಂದು ತಿಳಿಯುತ್ತದೆ .
ದಯವಿಟ್ಟು ಈ ಸಂಚಿಕೆಯನ್ನ  , ಪೂರ್ತಿಯಾಗಿ ನೋಡಿ .
ರಾಮ್ ಪ್ರಸಾದ್ ರನ್ನು  ಉತ್ತಮ ಮನುಷ್ಯರನ್ನಾಗಿಸಿದ ರಾಜ್ ಮತ್ತು ರಾಜ್ ರ ಚಿತ್ರಗಳು .

ಅಭಿಮಾನಿಗಳು ರಾಜ್ ರನ್ನು ತಮ್ಮ ಮನಸ್ಸಿನಲ್ಲಿ  ಪ್ರತಿಷ್ತಾಪಿಸಿಕೊಂಡಿದ್ದಾರೆ    , ಮತ್ತು ನಿತ್ಯವು  ಪೂಜಿಸುತ್ತಾರೆಂಬುದಕ್ಕೆ         ಇದೊಂದು ಉತ್ತಮ ಸಾಕ್ಷಿ .    

ಸರಳತೆಯ ಪ್ರತಿರೂಪ  Dr ರಾಜ್ ರವರ ಜೀವನ ಶ್ಯಲಿ  ಮತ್ತು ಅವರ ಮಾತುಗಳು  , ಎಂಬುದು  ಅವರ ಬೃಹತ್  ಬೆಳವಣಿಗೆಗೆ ಸೂತ್ರ  ಎಂದರೆ ತಪ್ಪಾಗಲಾರದು . ಅವರ ಸರಳತೆ, ನಮಗೆಲ್ಲ  ಬದುಕ ಕಲಿಸುವ ಪಾಠವಾಗಬೇಕೆಂಬುದು  ನನ್ನ ಆಶಯ  .
ಒಂದು ಮುತ್ತಿನ ಕಥೆ , ಸಾಕ್ಷಾತ್ಕಾರ  , ಬೇಡರ ಕಣ್ಣಪ , ಚಲಿಸುವ ಮೋಡಗಳು , ಮಯೂರ  , ನಾಂದಿ , ಜೀವನ ಚೈತ್ರ , ಹುಲಿಯ ಹಾಲಿನ ಮೇವು , ಬಬ್ರು ವಾಹನ, ಸಂಪತ್ತಿಗೆ ಸವಾಲ್ , ಗಿರಿ ಕನ್ಯೆ  ಚಿತ್ರಗಳ ಬಗ್ಗೆ ಇಲ್ಲಿ ನಮೂದಿಸಲು ನಾನು ಇಷ್ಟ ಪಡುತ್ತೇನೆ .

ಅದು ನಾನು ೮ ನೆ ತರಗತಿಯಲ್ಲಿ ಓದುತ್ತಿದ್ದೆ , ನಮಗೆ english grammer ಗೆ ಸಂಬಂಧ ಪಟ್ಟ ಹಾಗೆ " How to use phrases "not only" and "but also " in combining two sentences " ಎಂಬ ವಿಷಯದ ಬಗ್ಗೆ ಪಾಠ ಮಾಡುತ್ತಿದರು . ನಮ್ಮ ಶಿಕ್ಷಕಿ ಹೇಳಿದ ಮಾದರಿ , ಈಗಲೂ ನನ್ನ ಮನದಲ್ಲಿ ಇದೆ .
"Dr RajKumar is not only an actor ,but also a singer." ಎಂದು , ಆಗಲೇ ನನ್ನ ಮಂಕು ದಿಣ್ಣೆ ಗೆ ತಿಳಿದಿದ್ದು ಅಣ್ಣ ಹಾಡುತ್ತರೆಂದು .ನನ್ನ ಈ ಅಜ್ಞಾನಕ್ಕೆ ಕಾರಣ , ರಾಜ್ ಮತ್ತು ಪಿ ಬಿ ಶ್ರೀನಿವಾಸ್ ರ ಕಂಠ  ದಲ್ಲಿ ಹೋಲಿಕೆಗಳಿವೆ . ಇದು ಸ್ವತಃ ರಾಜ್ ಕೂಡ ಒಪ್ಪಿಕೊಂಡಿದ್ದಾರೆ , ಇದು ರಾಜ್ ರ ದೊಡ್ಡ ಗುಣ .

Dr  ರಾಜ್ ಎಂತಹ ಗಾಯಕರೆಂದರೆ , ದಯವಿಟ್ಟು ಈ ಮೂರು ಹಾಡುಗಳನ್ನು ಕೇಳಿ ,
೧) ನಾದಮಯಾ ಈ ಲೋಕವೆಲ್ಲಾ ...   Song - click here
೨) ದೇಹ ವೆಂದರೆ ಓ ಮನುಜ ..   Song - click here
೩) ಮೇಘಮಾಲೆ ... Song - click here
 ಈ ಮೂರು ಹಾಡುಗಳಲ್ಲಿ , ರಾಜ್ ರ  ಕಂಠ ಸ್ಥಿತಿ , ಗಾನ ಪ್ರೌಢಿಮೆ ಬಗ್ಗೆ , ವಾಹ್ ಎಂದು ಹೇಳುತ್ತಿರಿ .
ರಾಜ್ ರ ಚಿತ್ರದ ಗೀತೆಗಳಲ್ಲಿ ಸಾಹಿತ್ಯ ಉತ್ತಮ , ಅತ್ಯುತ್ತಮ . ಎಲ್ಲ ಗೀತೆಗಳು ನಮಗೆ ಜೀವನವನ್ನ ಕಲಿಸುತ್ತವೆ .
ಇಲ್ಲಿ ನಾವು ಚಿ. ಉದಯಶಂಕರ್ ರವರನ್ನು  ನೆನಪಿಸಿಕೊಳ್ಳಲೇಬೇಕು. 
ಕನ್ನಡಕ್ಕೆರಾಜ್ ರ ಕೊಡುಗೆ ಅಪಾರ , ಈ ಅಪಾರತೆ ಗೆ ಪಾರದರ್ಶಕ ನಮ್ಮ ಮನಸ್ಸುಗಳಾಗಬೇಕು. ಇದಕ್ಕೆ ಸೂಕ್ತ ಉದಾಹರಣೆ ಗೋಕಾಕ ಚಳುವಳಿ ಯಲ್ಲಿ ರಾಜ್ ರ ಸಕ್ರಿಯ ಪಾತ್ರ  . 

ಕನ್ನಡಕ್ಕೆ ಇವರು ಕೊಟ್ಟ ಗೌರವ ಹೇಗಿತ್ತೆಂದರೆ , ಇವರು ಅಭಿನಯಿಸಿದ ಎಲ್ಲ ಚಿತ್ರಗಳು ಕನ್ನಡ ಚಿತ್ರಗಳೇ ಆಗಿದ್ದವು , ಎಂಬುದು ನಮಗೆಲ್ಲ ಸಂತೋಷ ಕೊಡುವ ಸಂಗತಿ .
ನಾವು ಕೂಡ ರಾಜ್ ರಂತೆ ಕನ್ನಡ ದ ಬಗ್ಗೆ ಅಭಿಮಾನ ಇಮ್ಮಡಿ ಗೊಳಿಸಿಕೊಳ್ಳಬೇಕು.
ದಯವಿಟ್ಟು  ಮಕ್ಕಳಿಗೆ , ಡಾ ರಾಜ್ ಕುಮಾರ್ ರಂತಹವರ ಬಗ್ಗೆ ತಿಳಿಸಿ , ಕನ್ನಡ ಭಾಷೆಯಲ್ಲಿ ನಿಮ್ಮ ಮಕ್ಕಳು ಕಲಿಯಲು ಅವಕಾಶ ಮಾಡಿಕೊಡಿ . 

ನನ್ನ ಈ ಪುಟ್ಟ ವ್ಯಾಖ್ಯಾನದ ಕೊನೆಯ ಮಾತು ,
ರಾಜ್ ರ ಚಿತ್ರಗಳು ನಮಗೆ ಮಾದರಿ ,
ರಾಜ್ ರ ಸರಳ ಜೀವನ ನಮಗೆ ದಾರಿ ,
ನಿಮಗಾಗಿ , ಜನುಮದ ಜೋಡಿ ಚಿತ್ರದ ಡಾ|| ರಾಜ್‍ ಹಾಡಿರುವ ಗೀತೆಯ ಸಾಹಿತ್ಯ .

ಚಿತ್ರ: ಜನುಮದ ಜೋಡಿ
ಹಾಡಿರುವವರು: ಡಾ|| ರಾಜ್‍ಕುಮಾರ್
ಸಂಗೀತ: ವಿ.ಮನೋಹರ್
ಸಾಹಿತ್ಯ: ವಿ.ಮನೋಹರ್

ದೇಹವೆಂದರೆ ಓ ಮನುಜ ಮೂಳೆ ಮಾಂಸಗಳ ತಡಿ ಖನಿಜ
ಮನಸು ಆಸೆ ತುಂಬಿದ ಕಣಜ ಮೋಹದಿಂದ ದುಃಖವು ಸಹಜ
ನಶ್ವರ ಕಾಯ ನಂಬದಿರಯ್ಯ ಈಶ್ವರನೇ ಗತಿ ಮರೆಯದಿರಯ್ಯ
ತ್ಯಾಗದಿ ಪಡೆಯೋ ಸುಖವು ಶಾಶ್ವತ
ಕಟ್ಟಿರುವ ಗುಡಿಯಲ್ಲಿ ಉಟ್ಟಿರುವ ಮಡಿಯಲ್ಲಿ
ಸುಟ್ಟ ಧೂಪ ದೀಪದಿ ಶಿವನಿಲ್ಲ
ಬಗೆ ಬಗೆ ಮಂತ್ರದಲ್ಲಿ ಯಾಗ ಯಜ್ಞಗಳಲ್ಲಿ
ಜಪ ತಪ ವ್ರತದಲ್ಲಿ ಅವನಿಲ್ಲ
ಮಣ್ಣ ಕಣ ಕಣದಲ್ಲು ಜೀವ ಜೀವಗಳಲ್ಲು
ಒಳಗಿನ ಕಣ್ಣಿಗೆ ಕಾಣುವಾತನು
ದೇಹವೆಂದರೆ....
ಮೇಳು ಕೀಳಿನ ನಡತೆ ಹಾದಿ ತಪ್ಪಿದ ಜಡತೆ
ಕುಲ ವ್ಯಾಕುಲಗಳು ಸರಿಯೇನು
ರೋಷ ದ್ವೇಷದ ಉರಿಯು ಲೋಭ ಮೋಸದ ಪರಿಯು
ಸಾಗುವ ದಾರಿಗೆ ಬೆಳಕೇನು
ಅನ್ಯರ ಗುಣದಿ ಸನ್ಮತಿ ಹುಡುಕು
ಸತ್ಯದ ಪಥವೇ ಬೆಳ್ಳಿ ಬೆಳಕು
ಕರುಣೆ ಪ್ರೇಮವೆ ಉಲ್ಲಾಸ ನಿತ್ಯ ಕಾಯಕವೇ ಕೈಲಾಸ
ಚಿತ್ತ ನಿರ್ಮಲದಿ ಸಂತೋಷ ನೀತಿ ಮಾರ್ಗವೇ ಭವನಾಶ
ವೈಭೋಗ ಜೀವನ ತ್ಯಾಗವ ಮಾಡಿ ವೈರಾಗ್ಯ ಯೋಗದ ಸಾಧನೆ ಮಾಡಿ
ಕೈವಲ್ಯ ಹೊಂದುವ ಪರಮ ಸಂಪದ
ಕರುಣೆ ಪ್ರೇಮವೆ ಉಲ್ಲಾಸ ನಿತ್ಯ ಕಾಯಕವೇ ಕೈಲಾಸ
ಚಿತ್ತ ನಿರ್ಮಲದಿ ಸಂತೋಷ ನೀತಿ ಮಾರ್ಗವೇ ಭವನಾಶ
ಇಂತಿ  ನಿಮ್ಮ ,
ಗಂಗ.

Wednesday, January 19, 2011

ಚುಂಬಕ ಕವನ

ನಲ್ಲೆಯ ನೆನಪಿನ ಪ್ರೀತಿಯ ಮುತ್ತು
ನಲ್ಲನ ನಲಿವಿಗೆ ಕಾರಣವಿತ್ತು
ಪ್ರೀತಿಯ ಚುಂಬನ , ಚೆಂದದ ಮಾತು
ಪ್ರೇಮದ ಪಲ್ಲಕಿಗೆ ಸಾಕ್ಷಿಯಾಗಿತ್ತು ||

ಕೆನ್ನಯ ಅಂಗಳದಲಿ ಮೂಡಿದ ಮುತ್ತು
ಪ್ರಿಯಕರನ ಪ್ರೆಮಪಯಣಕೆ ಸಂಧ್ಯಾ ಸಮಯ
ಪ್ರಿಯೆಯ ತುಟಿಯ ಮಧುರ ಮಧು
ಪ್ರಿಯನ ಪಾಲಿಗೆ ಜೀವ ಧನ  ,


ನಲ್ಲೆಯ ನೆನಪಿನ ಪ್ರೀತಿಯ ಮುತ್ತು
ನಲ್ಲನ ನಲಿವಿಗೆ ಕಾರಣವಿತ್ತು ||
     

Saturday, January 1, 2011

ಹೊಸ ವರುಷದ ಶುಭಾಶಯಗಳು

ಹೊಸತು  ಹೊಸತು ಎಂದು ಗೋಗೆರೆವ  ಬಂಧುಗಳೇ
ಇಗೋ ನಿಮ್ಮೆಡೆಗೆ ಬರುತಿದೆ ಹೊಸವರುಷ ||

ಕಾಣದ ಊರಲ್ಲಿ , ಊಹಿಸದ ಗಡಿಯಲ್ಲಿ
ಸೇವೆ ಸಲ್ಲಿಸುತ್ತಿರುವ ,
ದೇಶವೆಂದರೆ ದೇಹವೆಂದು ತಿಳಿದು , ಪ್ರಾಣಾರ್ಪಣೆಗೈದ ವೀರ ಸೈನಿಕ ರಿಗೆ ,
ಇಗೋ ನಿಮ್ಮೆಡೆಗೆ ನಮ್ಮ ಹೊಸ ವರ್ಷದ ಶುಭಾಶಯ .

ರಾಜಕೀಯದ ರಂಗಲ್ಲಿ ಬಿದ್ದು ,
ದೇಶದ ಸಂಪತ್ತೆಲ್ಲ ದೋಚಿ ,
ಉಚ್ಚ್ಹ, ಪೊಳ್ಳು ಆಶ್ವಾಸನೆಗಳನ್ನಿವ ಪ್ರಜಾ ಪ್ರತಿನಿಧಿಗಳೇ ,
ಇಗೋ ನಿಮ್ಮೆಡೆಗೆ ನಮ್ಮ ಹೊಸ ವರ್ಷದ ಶುಭಾಶಯ .

ದ್ವೇಷ , ಸುಳ್ಳು , ಕೋಪ , ತಾಪ , ಭಯ , ಕಾಮ
ಎಂಬ ಕೂಪದೊಳು ಹೊಕ್ಕಿ , ಹೊರಬರದೆ ಬದಿದಾಡುತಿರುವ ಸ್ನೇಹಿತರೆ ,
ಇಗೋ ನಿಮ್ಮೆಡೆಗೆ ನಮ್ಮ ಹೊಸ ವರ್ಷದ ಶುಭಾಶಯ .

ಕಾಯಕವ ಬಿಟ್ಟು , ಕಲ್ಪವ ತೊರೆದು ,
ದೇಹ ಸಮೃದ್ದಿಗಾಗಿ , ಕೆಟ್ಟ ಕೆಲಸಗಳ ಮಾಡಿ,
ಜನರೆದುರು ದೊಡ್ದವರೆನಿಸಿಕೊಂಡ ದೊಡ್ದವರೇ ,
ಇಗೋ ನಿಮ್ಮೆಡೆಗೆ ನಮ್ಮ ಹೊಸ ವರ್ಷದ ಶುಭಾಶಯ .

ಕಂಡಕೂಡಲೇ ಕೈಎತ್ತಿ ಮುಗಿವ   ,
ಬೆನ್ನ ಹಿಂದೆ ಕಾಲೆತ್ತಿ ಒದೆವ,
ಇನ್ನೊಬರೆದುರು ಪರರ ಮಾನ ಮುರಿವ ಬಂಧು ಗಳೇ ,
ಇಗೋ ನಿಮ್ಮೆಡೆಗೆ ನಮ್ಮ ಹೊಸ ವರ್ಷದ ಶುಭಾಶಯ .

ಮುಗ್ದ ಮನಸ್ಸಿನ ಮಕ್ಕಳೇ ,
ಮಕ್ಕಳ ಮನಸ್ಸಿನ ವೃದ್ದರೆ,
ಎಲ್ಲವು ಅರಿತು , ಏನು ಅರಿಯದಂತೆ ಕರ್ನಾಟಕವನ್ನು ಕಾರ್ಕೋಟಕ ವನ್ನಗಿಸುತತಿರುವ ವಯಸ್ಕರರೆ ನಿಮಗೆ ,
ಇಗೋ ನಿಮ್ಮೆಡೆಗೆ ನಮ್ಮ ಹೊಸ ವರ್ಷದ ಶುಭಾಶಯ .

ಸುದ್ದಿವಾಹಿನಿಯೆಂಬ ಹೆಸರಿಟ್ಟುಕೊಂಡು ,
ಸರ್ವವನ್ನು ಉನ್ನತ ಸುದ್ದಿಯನ್ನಾಗಿ ತೋರಿಸುವ ,
ಬಹುಬೇಗನೆ ಸುದ್ದಿಯನ್ನು ಮರೆಸುವ ,
ಪ್ರಜಾಪ್ರಭುತ್ವದ ಕೆಟ್ಟ ರೂಪ ತೋರುವ ನಿಮಗೆ ,
ಇಗೋ ನಿಮ್ಮೆಡೆಗೆ ನಮ್ಮ ಹೊಸ ವರ್ಷದ ಶುಭಾಶಯ .

ದೇಶದ ಬೆನ್ನೆಲುಬಾದ ಯುವಕರೇ ,
ಚಟಗಳ ದಾಸ್ಯದಿಂದ ,
ಮೋಜೆಂಬ ಅಹಂಕಾರದಿಂದ ,
ಕಾಯಕವ ಮರೆತು , ಪೋಷಕರಿಗೆ ಹೊರೆಯಾದ ಮಿತ್ರರೇ ,
ಇಗೋ ನಿಮ್ಮೆಡೆಗೆ ನಮ್ಮ ಹೊಸ ವರ್ಷದ ಶುಭಾಶಯ .

                             ಹೊಸ ವರುಷಕೆ , ಹೊಸ ಹರುಷ ತರಲಿ ,
                             ಬೆಂದ ಜೀವನಕ್ಕೆ ತಂಪಾದ ಶ್ವಾಸ ತರಲಿ ,
                             ಹಳೆಯದನ್ನು ಮರೆತು , ಸುಜ್ಞಾನದಿಂದ ಮುಂದಿನ ಹೆಜ್ಜೆ ಇಡಲಿ,
                             ಕಾಯಕವೇ ಕೈಲಾಸವೆಂದು ತಿಳಿದು , ಸಂತೃಪ್ತರಾಗಿರಿ ,
                             ಎಂದು ಆಶಿಸುವ ,
                             ನಿಮ್ಮ ಪ್ರೀತಿಯ
                                  ಗಂಗ

Thursday, December 30, 2010

ಹೃದಯದಿಂದ ................

ತನು ಕರಗಿದಾಗ
ಜೀವದ ವೀಣೆ ಮೀಟಿದಾಗ , ದೇಹದಲ್ಲಿ ಜೀವವೇ ನಿಂತಾಗ ,
ನಿನ್ನ ಚೆಲುವೆ ನನ್ನ ಎಬ್ಬಿಸಿತು , ಪ್ರೇಮವೆಂಬ ಸಾಮ್ರಾಜ್ಯದಿಂದ || ||

ಜೀವ ಜೀವಕೂ , ಭಾವ ಭಾವನೆಗಳಿಗೂ
ಅತೀತವಾದ ನನ್ನ ಪ್ರೀತಿ ನಿನ್ನ
ಮನಕ್ಕೆ ತೃಪ್ತಿ ಕೊಟ್ಟರೆ ನಾ ಧನ್ಯ ,

ಉತ್ಪ್ರೇಕ್ಷೆಗೆ , ರೂಪಕಕ್ಕೆ ನಿನ್ನ ಬರೆಯಲು 
ನನ್ನಲ್ಲಿ ಭಾವನೆಗಳು ಇಲ್ಲದಾಗಿವೆ
ಈ ಪ್ರೇಮಪಾಶದಿಂದ ದಯವಿಟ್ಟು ನನ್ನ ಮುಕ್ತ ಗೊಳಿಸು

ಹೆಸರಿಗೆ, ಉಸಿರಿಗೆ, ಹಸಿರಿಗೆ, ಮನಸಿಗೆ
ಮೆದುಳಿಗೆ , ನನ್ನ ಕರ್ಮಕ್ಕೆ
ನೀನು ನನ್ನ ನೆಲವಾದೆ ,
ಚೆಲುವೆ ನಿನ್ನ ನೋಡಲು ನನ್ನ ಮನ ಹಂಬಲಿಸುತಿದೆ ............


ಹೀಗೆ ಎನ್ನ  ಮನದ ಮತ್ತಷ್ಟು ವ್ಯಥೆ ಗಳು ,

ರೆಪ್ಪೆಯ ಮೇಲಿರುವ ಎನ್ನ ಚೆಲುವೆ ,
ನನ್ನ ಕಣ್ಣಿಗೆ ಕಾಣದಾಹಿಳು
ನನ್ನ ಎಲ್ಲ ಆಲೋಚನೆಗಳಲ್ಲಿ ಹುದುಗಿರುವ  ನನ್ನ ಚೆಲುವೆ
ಮನದಲ್ಲಿ ಅಚ್ಚಾಗಿರುವಾಗ , ಕಣ್ಣ ದೃಷ್ಟಿಯಲ್ಲಿ ಏನಿದೆ ಸೊಗಸು  ||

ಚೆಲುವೆಯ ಅಂದ ನನ್ನ ಮನದಲ್ಲಿ
ಆಸೆ , ಬಯಕೆ ಉಂಟು ಮಾಡಿದೆ
ಆದರೆ  ಚೆಲುವೆಯ ನೆನದಲ್ಲಿ , ನನ್ನ ಮನದಲ್ಲಿ,
ಎನ್ನ ಇರುವಿಕೆಯೇ ಇಲ್ಲದಂತಾಗುತ್ತದೆ ||

ನನ್ನ ಕಣ್ಣಿಗೆ ಬಿದ್ದ ಎಲ್ಲ ಚೆಲುವೆಯರಿಗೆ , ನನ್ನ ಕವನಗಳು ಅರ್ಪಣೆ ......................

Sunday, December 19, 2010

ನಿಜ ಸ್ವಾಮಿ ಇದು ಸತ್ಯ !

ನಮಗೆ ಸ್ವಾತಂತ್ರ  ಬಂದಿದೆ ,ನಾವು ಭಾರತೀಯರು ,ನಾವು ಸ್ವತಂತ್ರರು ಎಂದು ಹೇಳಿಕೊಳ್ಳುವ ಪರಿಸ್ಥಿತಿ ಬರಬಹುದು ಎಂಬ ಭಯದಿಂದ ಈ ಲೇಖನವನ್ನು ಬರೆಯಲು ಸಜ್ಜಾಗುತ್ತಿದೇನೆ .

ಪರಕೀಯರಿಂದ ನಮ್ಮ ದೇಶವನ್ನ ನಮ್ಮ ಕೈಗೆ ತೆಗೆದುಕೊಂಡ ಕಾಲದಿಂದ ನಮಗೆ ತೊಂದರೆಗಳು ಒಂದರ ನಂತರ ಒಂದರಂತೆ ಪುಂಖಾನುಪುಂಖವಾಗಿ   ಒಕ್ಕರಿಸುತ್ತಿವೆ. ಇದರ resulte , ನಮ್ಮ ದೇಶ ಈಗಲೂ ಅಭಿವೃದ್ದಿಗೊಳುತಿರುವ   ರಾಷ್ಟ್ರ . ಇನ್ನು 30 ವರ್ಷಗಳ ನಂತರವೂ ನಮ್ಮ ದೇಶ ಅಭಿವೃದ್ದಿಗೊಳುತ್ತಿರುವ ರಾಷ್ಟ್ರವಾಗಿಯೇ ಉಳಿಯುವುದು ಎಂಬುದು ವಿಷಾದದ ಭವಿಷ್ಯ .

 ಏನು ಮಾಡೋದು ಸ್ವಾಮಿ ನಮ್ಮ ದೇಶದಲ್ಲಿ ಸಂಪತ್ತೆ ಇಲ್ಲ . ಇದ್ದ ಸಂಪತ್ತೆಲ್ಲ ಪೂರ್ವ ಸ್ವತಂತ್ರ ಕಾಲದಲ್ಲೇ ನಮ್ಮ ದೇಶದಿಂದ ಕೊಳ್ಳೆ ಹೊಡೆದಿದ್ದಾರೆ ಎಂದು ನೀವು ಕೇಳಬಹುದು , ಇದಕ್ಕೆ ನನ್ನ ಉತ್ತರ iste , ಒಂದು ದೇಶದ ಅತಿ ದೊಡ್ಡ  ಸಂಪತ್ತು ,ಮಾನವ ಸಂಪನ್ಮೂಲ ಸಂಪತ್ತು , ಈ ಸಂಪತ್ತನ್ನ ನಾವು ಸರಿಯಾಗಿ ಉಪಯೋಗಿಸಿಕೊಂಡಿದ್ದೆ ಆದಲ್ಲಿ ,ಅದು ಎಂಥಹ ದೇಶವೇ ಆಗಿರಲಿ ,ಅದು ಒಂದು supernatural power ಆಗಿ ಹೊರ ಹೊಮ್ಮಲಿದೆ ಎಂಬುದು ಸಾರವಕಾಲಿಕ ಸತ್ಯ , ಇದು ನಾನು ಹೇಳ್ತಿರೋದು ಅಲ್ಲ ಸ್ವಾಮಿ.

ಬಿಡಿ , ದೇಶದ ಬಗ್ಗೆ ಮಾತನಾಡುವ ದೊಡ್ಡ ವ್ಯಕ್ತಿಯು ನಾನಲ್ಲ ಮತ್ತು  ನನ್ನಲ್ಲಿ ಅಂಥಹ ಪಾಂಡಿತ್ಯವು ಇಲ್ಲ , ಒಂದಂತು ನಿಜ "ಪ್ರಜೆ ಪ್ರಜ್ಞಾವಂತ ನಾದರ ,ದೇಶವು ಪ್ರಜ್ವಲಿಸುತ್ತದೆ" ಎಂದು.

ಈಗ ವಿಷಯಕ್ಕೆ ಬರೋಣ ,
ಮೊನ್ನೆ ಶುಕ್ರವಾರ ಚಿತ್ರರಸಿಕರಿಗೆ ಡಬಲ್ ಧಮಾಕ , ಅಂದು  ಬಹುನಿರೀಕ್ಷಿತ , ಉಪೇಂದ್ರರ ಹೆಸರಿಡದ ಚಿತ್ರದ  ಬಿಡುಗಡೆ ಮತ್ತು ಅಂದೇ ಒಂದು ತೆರೆಮರೆಯಲ್ಲಿ , ಕಣ್ಣಂಚಿಗೆ ಹತ್ತಿರವಾದ ಚಿತ್ರ "ಖೆಲೆನ್ ಹುಂ ಜಿ ಜಾನ್ ಸೆ" ಚಿತ್ರದ ಬಿಡುಗಡೆ.
ಇಲ್ಲಿ ನಾನು ಒಂದು ಪದವನ್ನು ಉಪಯೋಗಿಸಿದೆ , ಕಣ್ಣಂಚು , ಈ ಪದಕ್ಕೆ  ಅಭೂತಪೂರ್ವ ಅರ್ಥವಿದೆ .
ನೀವು ಒಂದು ವಸ್ತುವನ್ನ ಕಣ್ಣಿನಿಂದ ನೋಡಬಹುದು , ಇದು ಪ್ರತಿ ಜೀವಿಗೂ ಗೊತ್ತಿರುವ ವಿಷಯ ( ಬೇರೆ ಹೇಳೋ ) ,
ಓಕೆ ಸರಿ ಸ್ವಾಮಿ ,
ಹಾಗೆ, ಅದು ಒಂದು ಕೆಲವು ಮೀಟರ್ ಗಳಷ್ಟು , ಕೆಲವು ಸೆಂಟಿ ಮೀಟರ್ ಗಳಷ್ಟು ದೂರವಿದ್ದರೆ ನಾವು ಅದನ್ನ ನೋಡಬಹುದು , ವಸ್ತುವಿನ ಗಾತ್ರವನ್ನ ನಾವು ಗಣನೆಗೆ ತಗೆದುಕೊಂಡೆವು ಎಂಬೋಣ .
 ಅದೇ ವಸ್ತುವನ್ನ ನಿಮ್ಮ ಕಣ್ಣ ಅಂಚಿನಲ್ಲಿ ಇಟ್ಟು ಗಮನಿಸಿ , ಅಲ್ಲಿ ನಿಮ್ಮ ದೃಷ್ಟಿಕೋನ   ಶೂನ್ಯವಾಗುತ್ತದೆ , ಆಗ ಏನು ಕಾಣಸಿಗುವುದಿಲ್ಲ .
ಅಂದರೆ ನಮ್ಮ ಜೀವನಕ್ಕೆ , ನಮ್ಮ ಭಾವನೆಗಳಿಗೆ ಹತ್ತಿರವಾದ ವಿಷಯಗಳನ್ನ ನಾವು ಬಹುಬೇಗನೆ ಕಂಡುಕೊಳ್ಳಲು  ಮತ್ತು ಅದರ ಬೆಲೆ ತಿಳಿಯಲು ಅಷ್ಟು ಬೇಗ ಸಾಧ್ಯವಾಗುವುದಿಲ್ಲ , ಕಾರಣ ಅವು ನಮ್ಮಲ್ಲಿ ಹುದುಗಿಬಿತ್ತಿವೆ  .
ಇಲ್ಲಿ ನಾನು ಮಾತನಾಡುತ್ತಿರುವುದು ನಮ್ಮ ದೇಶದ ಸ್ವತಂತ್ರ ಸಂಗ್ರಾಮ ಕಲಿಗಳ ಬಗ್ಗೆ.

correct ಅಲ್ವ ?

1947 ಆಗಸ್ಟ್ 15 ರಂದು midnight ನಮಗೆ ಸ್ವತಂತ್ರ ಬಂದಿದೆ ಎಂದು ತಿಳಿದು , ವರ್ಷಕ್ಕೊಮ್ಮೆ ರಜೆ enjoy ಮಾಡುವ ಕಾಲದಲ್ಲಿ ನಾವು ಇದ್ದೇವೆ ,ಅದು ಪ್ರಸಕ್ತ ಮತ್ತು ದುರದೃಸ್ಟಕರ .
ಆದರೆ ಈ  ಆಗಸ್ಟ್ 15 ,ಒಂದು ಸುವರ್ಣ ದಿನವಾಗಲು ಶ್ರಮಿಸಿದವರು ಅನೇಕರು , ಅಂಥಹ ಅನೇಕರಲ್ಲಿ ಒಬ್ಬರ ಕಥೆ ಯನ್ನ ಈ ಚಿತ್ರದಲ್ಲಿ ನಿರೂಪಿಸಲಾಗಿದೆ.

ಇದು ಸತ್ಯ ಕಥೆ ಸ್ವಾಮಿ !!!!!!!!!
ಈ ಚಿತ್ರದ ಬಗ್ಗೆ  ಹೇಳ್ತಿನಿ , ಈ ಚಿತ್ರವೂ ಒಂದು ಸತ್ಯ ಕಥೆ , ಸತ್ಯ ಕಥೆ ಆಧಾರಿತ  ಚಿತ್ರ . ಇದು 1930 ರಿಂದ 1934 ರವರೆಗೆ ಬಂಗಾಳದಲ್ಲಿ ನಡೆದ ಸ್ವತಂತ್ರ ಸಂಗ್ರಾಮದ ಒಂದು ಪುಟ . ಈ ಪುಟ ದ ಅಸ್ತಿತ್ವ ದ ಬಗ್ಗೆ ಬಹು ಮಂದಿಗೆ ತಿಳಿದೇ ಇಲ್ಲ , ಕಾರಣ ತಿಳಿದಿಲ್ಲ .
ಇದನ್ನ ಪುಸ್ತಕ ರೂಪದಲ್ಲಿ ಬರೆದವರು Manini chatterjee   , ಪುಸ್ತಕದ ಹೆಸರು  DOandDIE: ದಿ chittagong uprising   ,
ಹೆಸರೇ ಹೇಳುವಂತೆ ಇದು ಸ್ವಾತಂತ್ರಕ್ಕಾಗಿ ಪ್ರಾಣದಾನ ಮಾಡಿದವರ ಕಥೆ.
ಇಲ್ಲಿ ನಾನು ಕಥೆ ಹೇಳಲು ಇಚ್ಚಿಸುವುದಿಲ್ಲ , ದಯವಿಟ್ಟು ಒಮ್ಮೆ ಚಿತ್ರಮಂದಿರದಲ್ಲಿ ಚಿತ್ರ ನೋಡಿ,
ಸ್ವತಂತ್ರ ಎಂಬುವ ಪದದ ಅರ್ಥ ತಿಳಿವುದು , ತ್ಯಾಗ ಎಂಬ ಪದದ ಅರ್ಥ ತಿಳಿವುದು .
ಎಂದಿನಂತೆ ಅಶುತೋಷ್ ಗೊವಾರಿಕರ್ , ಒಬ್ಬ ಉತ್ತಮ ನಿರ್ದೇಶಕ ಎಂದು ನಿರೂಪಿಸಿದ್ದಾರೆ .

ಚಿತ್ರ ರಸಿಕರು , ದೇಶ ಭಕ್ತರು , ಕಾಂಗ್ರೆಸ್ಸಿಗರು  , BJP ಗಳು , communistaru , ಓಟು ಹಾಕದವರು , ಓಟು ಹಾಕುವವರು , ಓಟು ಹಾಕಲು ಅರ್ಹತೆ ಇಲ್ಲದವರು , ನಮ್ಮ ದೇಶ ಭಾರತ ಎಂದು ತಿಳಿದವರು ,ಸಾಮಾನ್ಯ ಮನುಷ್ಯರು ಎಲ್ಲರು ಚಿತ್ರ ನೋಡಿ ,

ಏನಾದರು ಚಿತ್ರದಲ್ಲಿ ಕಲಿಕೆ ವಸ್ತು ವಿದ್ದರೆ ಕಲಿಯಿರಿ .


ಸ್ವಲ್ಪ emotional ಅಗಿಬಿಡ್ತ್ಹಿವಿ  ಅಲ್ವ , ದೇಶದ ವಿಷಯಕ್ಕೆ ಬಂದಾಗ !!!!!!!!!!!!!!!!!!!!!!!!!!!!!!

ಸಿಗೋಣ ಮತ್ತೆ , ಇಂತಿ ನಿಮ್ಮ
ಗಂಗ

Monday, April 26, 2010

ಪೃಥ್ವಿ - ಗಣಿ ದಣಿಗಳ ಮೇಲೆ ಮೊದಲ ದನಿ

As usual ಕೆಲಸ ಮುಗಿಸಿಕೊಂಡು ಶುಕ್ರವಾರ ಮನೆಗೆ ಹೋದೆ ,ಮಳೆಗೆ ಸಿಕ್ಕಿ ನನ್ನ ಭಾಧೆ ಬೇಡ.
ತುಮಕೂರಿನಲ್ಲಿ ಆಲಿ ಕಲ್ಲು ಸಹಿತ ಮಳೆ ಯು ಬಿದ್ದಿತ್ತು, ಹತ್ತಾರು ಮರಗಳು ಭೂತಾಯಿಯ ಮಡಿಲು ಸೇರಿದ್ದವು.

ಈ ಭಾರಿ ಬೆಂಗಳೂರು ನಿಜವಾಗಿಯೂ ಬೆಂದಕಾಳೂರು ಆಗಿತ್ತು ,ಈ ಪ್ರಕೃತಿ ವ್ಯಪರಿತ್ಯ ಗಳಿಂದ ಮಳೆಯೂ ಈ ಬಾರಿ ಹೆಚ್ಚೇ ಎಂದು ಹೇಳ ಲಾಗುತ್ಹಿದೆ.

ಇದೆಲ್ಲ ಇರಲಿ, ಪ್ರಕ್ರತಿ ಅಥವಾ ಭೂಮಿ ನಮ್ಮ ಪಾಡಿಗೆ ಹಾಳಗ್ಥಿದೆಯೇ ಹೊರತು , ಭೂಮಿಯ ಪಾಡಿಗೆ ಅಲ್ಲ ಅಂತ ಪೂ . ಚo . ತೆe , ಹೇಳಿದ ಮಾತು ನೆನಪಿಸಿ ಇದನ್ನು ತುಸು ಮರೆಯೋಣ.

ನನ್ನ ಸ್ನೇಹಿತನೊಂದಿಗೆ ಶನಿವಾರ ಅಂದ್ರೆ ಕ್ರಿ .ಶ ೨೦೧೦ ಏಪ್ರಿಲ್ ೨೪ ,ಪೃಥ್ವಿ ಎಂಬ ಹೊಸ ಕನ್ನಡ ಚಿತ್ರವನ್ನು ತುಮಕೂರಿನ ವರ್ಲ್ಡ್ ಫೇಮಸ್ ಗಾಯತ್ರಿ ಚಿತ್ರಮಂದಿರದಲ್ಲಿ ನೋಡಲು ಹೋದೆವು. ಬಿಸಿಲ ಬೇಗೆ ನಮ್ಮ ದೇಹವನ್ನು ಕಾದುತ್ಹಿತು .

ಹೇಗೋ ಚಿತ್ರಮಂದಿರದಲ್ಲಿ ಕುಳಿತೆವು ,ಚಿತ್ರವೂ ಪ್ರರಂಬವಯಿತು .
ಹೀರೋ ನಮ್ಮ ಪುನೀತ್ ರಾಜ ಕುಮಾರ್ , ಒಳ್ಳೆಯ actor .
ಆದ್ರೆ ಚಿತ್ರದ ನಾಯಕಿ ಪಾರ್ವತಿ ಮೆನನ್ ಮಾತ್ರ , ಸ್ಕ್ರೀನ್ ಕಡೆ ಮತ್ತೊಮ್ಮೆ ನೋಡುವಂತೆ ಮಾಡುತ್ತಾಳೆ .

ನಮ್ಮ ಕರ್ನಾಟಕದ ಗಡಿ ಭಾಗವಾದ , ಕಬ್ಬಿಣದ ಬೀಡು , ಈಗಿನ ರಾಜಕೀಯದ ವರ್ಲ್ಡ್ ಬ್ಯಾಂಕ್ , ಗಣಿ ದಣಿಗಳ ಬೀಡು, ರೈತರ ಬಳಿ ಭೂಮಿ ಕಸಿದು ಕೊಂಡು ಏರ್ ಪೋರ್ಟ್ ಮಾಡಹೊರಟಿರುವ ಜಿಲ್ಲೆ , ಸದಾ ದೂಳುತುಮ್ಬಿದ ಪ್ರದೇಶ ನಮ್ಮ ರಾಜ್ಯದ ಬಳ್ಳಾರಿ .
ಚಿತ್ರದ ನಾಯಕ ಇಲ್ಲಿ ಒಬ್ಬ ಐಎಎಸ್ ಅಧಿಕಾರಿ, ಐಎಎಸ್ ಅವನ ಜೀವನದ ಗುರಿ , ಬಳ್ಳಾರಿ ಗೆ ಅವನ ವರ್ಗಾವಣೆ ಆಗುತ್ತದೆ.
ಆ ಹೊತ್ತಿಗೆ ಎರಡು ಹಾಡು, ಮದುವೆ ಮುಂತಾದವು ಮುಗಿದಿರುತ್ತದೆ .

ಚಿತ್ರದಲ್ಲಿ , ಬಳ್ಳಾರಿ ಯಾ ಮೈನಿಂಗ್ ನಿಂದ ನಡೆಯುತ್ತಿರುವ , ಎಲ್ಲ ಸಮಸ್ಯೆಗಳನ್ನು ತೋರಿಸಲಾಗಿದೆ.
Bhorpade ಸಮಿತಿಯ survey ರಿಪೋರ್ಟ್ ಅನ್ನು , ಗಣಿ ಧಣಿಗಳು ಪಡೆಯಲುನಿರ್ದರಿಸುತ್ತಾರೆ , ಕಾರಣ ಅದರಲ್ಲಿ ಗಡಿಯ ಬಗ್ಗೆ ಹಲವಾರು ಉಪಯುಕ್ತ ಮಾಹಿತಿ ಗಳರುತ್ತವೆ.

ಆದರೆ ಸುರ್ವೆಯೇರ್ ಕಾಂತರಾಜು , ಇವರಿಗೆ ಭಯಪಟ್ಟು ಆಂಧ್ರಕ್ಕೆ ಹೋಗಿರುತ್ತಾನೆ.
ನಮ್ಮ ಐಎಎಸ್ ,ಅಲ್ಲಿ ಒಬ್ಬ ದಕ್ಷ ಆಧಿಕಾರಿಯಗಿತ್ತಾನೆ, ಕಾಂತರಾಜು ಅವನಿಗೆ survey ರಿಪೋರ್ಟ್ ಅನ್ನು ತಲುಪಿಸುತ್ತಾನೆ.
ಇಷ್ಟು ಕಥೆಯ ಎಳೆ.

ರೈತರ ಸಮಸ್ಯೆ, ಕುಡಿಯುವ ನೀರಿನ ಸಮಸ್ಯೆ ಎಲ್ಲವನ್ನು ಚೆನ್ನಾಗಿ ತೋರಿಸಲಾಗಿದೆ.
ಬಿಜೆಪಿ ಸರಕಾರ ಇರುವಾಗ , ಈ ತರಹದ ಚಿತ್ರ ಮಾಡಲು ಧುಂ ಬೇಕು , ಅದು ನಿರ್ಮಾಪಕ ಅಂಡ್ ನಿರ್ದೇಶಕ ಜಾಕೋಬ್ ಅಲ್ಲಿ ಇದೆ ಎಂದು ಸಾಬಿತು ಮಾಡಿ ದ್ದಾರೆ .

ಸಾಧು ಕೋಕಿಲ ಕಾಮಿಡಿ ಇದೆ, ಒಳ್ಳೆ punching ಡೈಲಾಗ್ ಗಳು ಇವೆ. ಮಧು ಒಳ್ಳೆಯ ಕೆಲಸ ಮಾಡಿ ದ್ದಾರೆ .
ಹಾಡುಗಳು ಕೇಳುವುದು ಕಷ್ಟ.

Totally , good ಮೂವಿ .

ಇಂತಿ ನಿಮ್ಮ ,
ಗಂಗ